Monday, January 25, 2021
Home ಜಿಲ್ಲೆ ಕಲಬುರ್ಗಿ ಕಲಬುರ್ಗಿಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿ

ಇದೀಗ ಬಂದ ಸುದ್ದಿ

ಕಲಬುರ್ಗಿಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿ

ಕಲಬುರ್ಗಿ; ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿಯಾಗಿದೆ. ಕಲಬುರ್ಗಿ ನಗರ ಸೇರಿ ಜಿಲ್ಲೆಯ ಮೂರು ಕಡೆ ಏಕ ಕಾಲಕ್ಕೆ ಡ್ರೈ ರನ್ ಅಣಕು ಮಾಡಲಾಯಿತು. ಡ್ರೈ ರನ್ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿದ ಡಿ.ಸಿ. ವಿ.ವಿ. ಜ್ಯೋತ್ಸ್ನಾ ಹಾಗೂ ಡಿ.ಎಚ್.ಒ. ಡಾ.ರಾಜಶೇಖರ ಮಾಲಿ ಪರಿಶೀಲನೆ ನಡೆಸಿದರು. ದೇಶದ ಮೊದಲ ಕೊರೋನಾ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿಯಾಗಿದೆ. ಕಲಬುರ್ಗಿ ನಗರ ಸೇರಿ ಜಿಲ್ಲೆಯ ಮೂರು ಕಡೆ ಕೋವಿಡ್ ವ್ಯಾಕ್ಸಿನೇಷನ್ ಹಾಕುವ ಅಣಕು ಪ್ರದರ್ಶನ ಮಾಡಲಾಯಿತು.

ಕಲಬುರ್ಗಿಯ ಅಶೋಕ ನಗರ ಆರೋಗ್ಯ ಕೇಂದ್ರ, ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಅವರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜೇವರ್ಗಿ ತಾಲೂಕು ಆಸ್ಪತ್ರೆಗಳಲ್ಲಿ ಡ್ರೈ ರನ್ ನಡೆಯಿತು. ಅಶೋಕ ನಗರ ಆರೋಗ್ಯ ಕೇಂದ್ರ ಸೇರಿ ಮೂರು ಕಡೆ ಏಕ ಕಾಲಕ್ಕೆ ವ್ಯಾಕ್ಸಿನ್ ಹಾಕೋ ಅಣಕು ಪ್ರದರ್ಶನ ಮಾಡಲಾಯಿತು. ಪ್ರತಿ ಕೇಂದ್ರಕ್ಕೂ 25 ಜನ ಕೊರೋನಾ ವಾರಿಯರ್ಸ್ ಗೆ ವ್ಯಾಕ್ಸಿನ್ ಹಾಕೋ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಈ ಪ್ರಕ್ರಿಯೆ ನಡೆಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿದ್ದ ಕೋವಿಡ್ ವಾರಿಯರ್ ಗಳನ್ನು ಡ್ರೈ ರನ್ ಗೆ ಆಯ್ಕೆ ಮಾಡಲಾಗಿತ್ತು. ಪ್ರತಿ ಕೇಂದ್ರದಲ್ಲಿಯೂ ಮೂರು ವಿಭಾಗಗಳನ್ನು ಮಾಡಲಾಗಿತ್ತು. ಮೊದಲ ವಿಭಾಗದಲ್ಲಿ ಕೋವಿಡ್ ವಾರಿಯರ್ ಮಾಹಿತಿ ಪಡೆದು, ದಾಖಲೆ ಪರಿಶೀಲಿಸಲಾಯಿತು. ಎರಡನೆಯ ವಿಭಾಗದಲ್ಲಿ ವ್ಯಾಕ್ಸಿನ್ ಹಾಕಲಾಯಿತು. ಮೂರನೇ ವಿಭಾಗದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡವರನ್ನು ಅರ್ಧ ಗಂಟೆಗಳ ಕಾಲ ಅಬ್ಸರ್ ವೇಷನ್ ಮಾಡಲಾಯಿತು. ಡ್ರೈ ರನ್ ಹಿನ್ನೆಲೆಯಲ್ಲಿ ಅಶೋಕ ನಗರ ಆರೋಗ್ಯ ಕೇಂದ್ರಕ್ಕೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ, ಡಿ.ಎಚ್.ಒ. ಡಾ.ರಾಜಶೇಖರ ಮಾಲಿ ಭೇಟಿ ನೀಡಿ ಡೆಮೋ ಪರಿಶೀಲನೆ ಮಾಡಿದರು. ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಡಿ.ಎಚ್.ಒ. ಜಿಲ್ಲೆಯ ಮೂರು ಕಡೆ ಡ್ರೈ ರನ್ ನಡೆದಿದೆ. ಪ್ರತಿ ಕೇಂದ್ರದಲ್ಲಿಯೂ ವ್ಯಾಕ್ಸಿನ್ ಡೆಮೋ ನಡೆದಿದೆ. ಕೊರೋನಾ ವಾರಿಯರ್ಸ್ ಬಂದು ಡೆಮೋ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಇದೆಲ್ಲದರ ಮಾಹಿತಿ ಪಡೆದು ರಾಜ್ಯ ಸರ್ಕಾರಕ್ಕೆ ಫೀಡ್ ಬ್ಯಾಕ್ ಕೊಡಲಾಗುವುದು. ಮುಂದೆ ವ್ಯಾಕ್ಸಿನ್ ಹಾಕುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಏನು ಸುಧಾರಣೆ ಮಾಡಬೇಕು, ಸರಳೀಕರಮಕ್ಕೆ ಏನು ಕ್ರಮ ಕೈಗೊಳ್ಳಬೇಕೆಂಬ ಕುರಿತು, ಏನಾದರೂ ನ್ಯೂನ್ಯತೆ ಕಂಡು ಬಂದರೂ ಫೀಡ್ ಬ್ಯಾಕ್ ಕೊಡಲಾಗುವುದು ಎಂದ ತಿಳಿಸಿದ್ದಾರೆ.

ಡೆಮೋ ವ್ಯಾಕ್ಸಿನ್ ಪ್ರಕ್ರಿಯೆಯಲ್ಲಿ ಭಾಗಿಯಾದ ಕೊರೋನಾ ವಾರಿಯರ್ಸ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಡ್ರೈ ರನ್ ಗೆ ನಮ್ಮನ್ನು ಆಯ್ಕೆ ಮಾಡಿದೆ. ಖುಷಿಯಿಂದಲೇ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಕಲಬುರ್ಗಿ ನಗರ, ಗ್ರಾಮೀಣ ಹಾಗೂ ತಾಲೂಕು ಕೇಂದ್ರ ಮೂರು ಕಡೆಯೂ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಪ್ರಕ್ರಿಯೆ ಯಶಸ್ವಿಯಾಗಿದೆ. ಡ್ರೈ ರನ್ ಸಂದರ್ಭದಲ್ಲಿ ಎದುರಾದ ಸಮಸ್ಯೆ ಇತ್ಯಾದಿಗಳ ಕುರಿತು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆಯಾಗಲಿದೆ. ಎಲ್ಲ ನ್ಯೂನ್ಯತೆ ಸರಿಪಡಿಸಿಕೊಂಡು, ವ್ಯಾಕ್ಸಿನೇಷನ್ ಸುಸೂತ್ರವಾಗಿ ನಡೆಸಲು ಆಯೋಜಿಸಿದ್ದ ತಾಲೀಮು ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲರ ಚಿತ್ತ ಕೋವಿಡ್ ವ್ಯಾಕ್ಸಿನ್ ನತ್ತ ನೆಟ್ಟಿದೆ.

TRENDING