Sunday, January 24, 2021
Home ಬೆಂಗಳೂರು ಬೆಂಗಳೂರಿನ 3 ಕಡೆ ಕೊರೋನಾ ಲಸಿಕೆ ತಾಲೀಮು ಆರಂಭ

ಇದೀಗ ಬಂದ ಸುದ್ದಿ

ಬೆಂಗಳೂರಿನ 3 ಕಡೆ ಕೊರೋನಾ ಲಸಿಕೆ ತಾಲೀಮು ಆರಂಭ

 ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎರಡು ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ಹೊರವಲಯದ ಒಂದು ಕೇಂದ್ರದಲ್ಲಿ ಶನಿವಾರ ಕೊರೋನಾ ಲಸಿಕೆ ಹಾಕುವ ತಾಲೀಮು ಆರಂಭವಾಗಿದೆ.

ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಆನೇಕಲ್ ಭಾಗದ ಹರ್ಗಾದೆಯಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸೀಕೆ ತಾಲೀಮು ನಡೆಸಲಾಗುತ್ತಿದೆ.

 ಎರಡು ಗಂಟೆಗಳ ಕಾಲ ಲಸಿಕಾ ತಾಲೀಮು ನಡೆಯಲಿದ್ದು, ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 25 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.

ಮೂರು ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ಒಟ್ಟು 75 ಮಂದಿ ಕಾರ್ಯಕರ್ತರಿಗೆ ಲಸಿಕೆ ತಾಲೀಮು ನಡೆಸಲಾಗುತ್ತಿದೆ. ತಾಲೀಮು ಪೂರ್ಣಗೊಳ್ಳುತ್ತಿದ್ದಂತೆಯೇ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಲಸಿಕೆ ನೀಡಲು ನಗರದಲ್ಲಿ ಒಟ್ಟು 1,517 ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲಸಿಕೆ ನೀಡುವ ಕಾರ್ಯ ಆರಂಭಿಸಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

TRENDING