ಹಾಂಕಾಂಗ್: ಪ್ರಸಿದ್ಧ ಕಂಪನಿ ಆಯಪಲ್ ತನ್ನ ಮೊಬೈಲ್ ಸ್ಟೋರ್ ನಿಂದ 39 ಸಾವಿರ ಚೀನಾ ಗೇಮ್ ಆಯಪ್ ಗಳನ್ನು ಗುರುವಾರ ತೆಗೆದುಹಾಕಿದೆ. ಮೊಬೈಲ್ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟು ಆಯಪ್ ಗಳನ್ನು ತೆಗೆದು ಹಾಕಿದ್ದು ಇದೇ ಮೊದಲು.
ಚೈನಾ ಆಡಳಿತದಿಂದ ಅನುಮತಿ ಪಡೆಯದ 46 ಸಾವಿರ ಆಯಪ್ ಗಳಿಗೆ ಆಯಪಲ್ ಕಂಪನಿ ಕಳೆದ ಜೂನ್ ನಲ್ಲೇ ನೋಟಿಸ್ ನೀಡಿತ್ತು. ಆಡಳಿತದಿಂದ ಪಡೆದ ಲೈಸನ್ಸ್ ಹಾಜರುಪಡಿಸುವಂತೆ ಸೂಚಿಸಿತ್ತು. ಡೆಡ್ ಲೈನ್ ಅನ್ನು ಡಿಸೆಂಬರ್ 31 ರವರೆಗೂ ಮುಂದುವರಿಸಿತ್ತು. ಆದರೂ ದಾಖಲೆ ನೀಡದ ಆಯಪ್ ಗಳನ್ನು ತೆಗೆದು ಹಾಕಿದೆ.
ಆಯಪಲ್ ಯುಬಿಸಾಫ್ಟ್ ಅಸ್ತಿತ್ವಕ್ಕೆ ಗೇಮಿಂಗ್ ಆಯಪ್ ಗಳು ಧಕ್ಕೆ ತರುವ ಕಾರಣ ನೀಡಿ ಈ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಈಗ ಆಯಪಲ್ ಚೀನಾ ಸ್ಟೋರ್ ನಲ್ಲಿರುವ ಟಾಪ್ 1500 ಗೇಮಿಂಗ್ ಆಯಪ್ ಗಳಲ್ಲಿ 74 ಮಾತ್ರ ಉಳಿದುಕೊಂಡಿವೆ ಎಂದು ಸಂಶೋಧನಾ ಸಂಸ್ಥೆ ಕ್ವಿಮಿ ಹೇಳಿದೆ.