Friday, January 22, 2021
Home ರಾಜ್ಯ ಜ.4ರಿಂದ ಮೈಸೂರು-ಬೆಂಗಳೂರು ಪ್ಯಾಸೆಂಜರ್‌ ರೈಲು ಸಂಚಾರ ಆರಂಭ

ಇದೀಗ ಬಂದ ಸುದ್ದಿ

ಜ.4ರಿಂದ ಮೈಸೂರು-ಬೆಂಗಳೂರು ಪ್ಯಾಸೆಂಜರ್‌ ರೈಲು ಸಂಚಾರ ಆರಂಭ

ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಕೆಲವು ಮಾರ್ಗಗಳಲ್ಲಿ ಭಾನುವಾರ ಹೊರತುಪಡಿಸಿ . 4ರಿಂದ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಆರಂಭಿಸಲಿದೆ.

06255 ಸಂಖ್ಯೆಯ 16 ಬೋಗಿಗಳ ರೈಲು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ಬೆಂಗಳೂರಿನಿಂದ ಸಂಜೆ 7ಕ್ಕೆ ಹೊರಟು ರಾತ್ರಿ 10ಕ್ಕೆ ಮೈಸೂರು ತಲುಪಲಿದೆ. 06256 ಸಂಖ್ಯೆ ರೈಲು ಬೆಳಗ್ಗೆ 6.10ಕ್ಕೆ ಮೈಸೂರಿನಿಂದ ಹೊರಟು

9.15ಕ್ಕೆ ಬೆಂಗಳೂರಿಗೆ ತಲುಪುತ್ತದೆ. 06257 ಸಂಖ್ಯೆಯ ರೈಲು ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ಆಗಮಿಸಲಿದೆ. 06258 ಸಂಖ್ಯೆ ರೈಲು ಮೈಸೂರಿನಿಂದ ಮಧ್ಯಾಹ್ನ 1.45ಕ್ಕೆ ಹೊರಟು ಸಂಜೆ 5ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲುಗಳು ನಾಯಂಡಹಳ್ಳಿ, ಜ್ಞಾನ ಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಶೆಟ್ಟಿಹಳ್ಳಿ, ನಿಡಘಟ್ಟ, ಮದ್ದೂರು, ಹನಕೆರೆ, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಚಂದಗಿರಿ ಕೊಪ್ಪಲ್‌, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗನಹಳ್ಳಿಯಲ್ಲಿ ನಿಲುಗಡೆ ಹೊಂದಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ಹಿನ್ನೆಲೆಯಲ್ಲಿ ಜ. 4ರಂದು ಬಂಗಾರಪೇಟೆ-ಮೈಸೂರು ಮೆಮೂ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ

TRENDING