Wednesday, January 20, 2021
Home ಜಿಲ್ಲೆ ತುಮಕೂರು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಭೀಮ ಕೊರೆಂಗಾವ್ ವಿಜಯೋತ್ಸವ ಆಚರಣೆ

ಇದೀಗ ಬಂದ ಸುದ್ದಿ

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಭೀಮ ಕೊರೆಂಗಾವ್ ವಿಜಯೋತ್ಸವ ಆಚರಣೆ

ಶಿರಾ:- ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಭೀಮ ಕೊರೆಂಗಾವ್ ವಿಜಯೋತ್ಸವ ಆಚರಣೆ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ  ವತಿಯಿಂದ  ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಟೈರ್ ರಂಗನಾಥ್ ರವರು ಮಾತನಾಡಿ ಕೊರೆಂಗಾವ್ ಯುದ್ದ ನಮ್ಮೆಲ್ಲರ ಪ್ರೇರಣೆ.

ಈ ದೇಶದಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಯುದ್ದ ಅಂತ ಯಾವುದಾದರೂ ನಡೆದಿದ್ದರೆ ಅದು ಭೀಮ ಕೊರೆಂಗಾವ್ ಯುದ್ದ ಇದರ ಮುಂದಾಳತ್ವವನ್ನು ಸಿದ್ದನಾಕ ಮತ್ತು ಅವರ 500ವೀರ ಮಹರ್ ಯೋಧರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದಲಿತರಿಗೆ ಹಿಂದುಳಿದವರಿಗೆ ಶಿಕ್ಷಣ ಸಮಾನತೆ ಸಿಗಬೇಕೆಂದು ಹೋರಾಟ ನಡೆಸಿದರು.

1818 ರ ಜನವರಿ 1 ರಂದು  ಮಹಾರಾಷ್ಟ್ರದ ಭೀಮಾ ತೀರದಲ್ಲಿ ಸುಮಾರು 30,000 ಪೇಶ್ವೇಗಳನ್ನ ಸೆದೆ ಬಡಿದು ವಿಜಯ ಸಾಧಿಸಿದ್ದು ಇದನ್ನು ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಮೂದಿಸಿರುವುದಿಲ್ಲ ಇದು ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ತಾರತಮ್ಯ ಇಂತಹ ಅದೆಷ್ಟೋ ಮುಚ್ಚಿಟ್ಟ ಇತಿಹಾಸವನ್ನ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೊರತೆಗೆದು ನಮ್ಮೆಲ್ಲರಿಗೂ ತಿಳಿಸಿದ್ದಾರೆ ಇವತ್ತಿನ ಯುವ ಸಮುದಾಯ ಅದನ್ನ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು

ಸಿಪಾಯಿ ದಂಗೆಗೆ ಮೊದಲೇ ನಡೆದಿದ್ದ ದಂಗೆ ಭೀಮ ಕೊರೆಂಗಾವ್ ದಂಗೆ ಇದರ ಮುಂದಾಳತ್ವವನ್ನು ವಹಿಸಿದ್ದ ಸಿದ್ದನಾಕ ಬ್ರಿಟೀಷ್ ಸೈನ್ಯದಲ್ಲಿ ಬಹುದೊಡ್ಡ ನಾಯಕನಾಗಿ ಒಳ್ಳೆಯ ಯುದ್ಧ ನಿಪುಣನಾಗಿ ಕೆಲಸ ಮಾಡುತ್ತಿದ್ದನ್ನು ಸಹಿಸದ ಪೇಶ್ವೆಗಳು ಅಸ್ಪೃಶ್ಯರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದ್ದರು ಅದನ್ನ ಸಹಿಸದೆ ದಂಗೆ ಎದ್ದು ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದರು ಎಂದು ಹುಲಿಕುಂಟೆ ಹೋಬಳಿ ಸಂಯೋಜಕ ಭೂತರಾಜು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣನಾಯ್ಕಾ ರವರು ಮಾತನಾಡಿ ಶಿರಾ ಜನತೆಗೆ ಭೀಮ ಕೊರೆಂಗಾವ್ ಯುದ್ಧದ ಬಗ್ಗೆ ಪರಿಚಯ ಮಾಡುತ್ತಿರುವ ಸಂಘಟಕರಿಗೆ ಧನ್ಯವಾದಗಳನ್ನು ತಿಳಿಸಿದರು

ಕಾರ್ಯಕ್ರಮದಲ್ಲಿ ಶ್ರೀರಂಗಪ್ಪ, ಹುಣಸೇಕಟ್ಟೆ ನಾಗರಾಜು, ನಿಲಯ ಪಾಲಕರಾದ ಹನುಮಂತರಾಯಪ್ಪ,ಹುಳುಲಯ್ಯ ನವರು ಮತ್ತು ಆರಕ್ಷಕ ಠಾಣೆ ವೆಂಕಟೇಶ್ ರವರು, ರಂಗೇಗೌಡ ರವರು ಹಾಗೂ ನರಸಿಂಹಮೂರ್ತಿ, ರಾಜು ಕೆ ಖಜಾಂಚಿ, ಗೋಪಾಲಕೃಷ್ಣ ಬಸವನಹಳ್ಳಿ, ಗೋಪಾಲ್ ಹುಂಜಿನಾಳ್ ಕಾರ್ತಿಕ್, ಕಾರಳಪ್ಪ, ಮಹೇಶ್, ರಂಗನಾಥ್,ಜಯಣ್ಣ ಮುಂತಾದವರು ಉಪಸ್ಥಿತರಿದ್ದರು

ವರದಿ ಶ್ರೀಮಂತ್

ಶಿರಾ ತುಮಕೂರು ಜಿಲ್ಲೆ..

TRENDING