Thursday, January 21, 2021
Home ದೇಶ ಭಾರತ-ಬ್ರಿಟನ್ ವಿಮಾನ ಸಂಚಾರ ಇದೇ ಜನವರಿ 8ರಿಂದ ಪುನಾರಂಭ

ಇದೀಗ ಬಂದ ಸುದ್ದಿ

ಭಾರತ-ಬ್ರಿಟನ್ ವಿಮಾನ ಸಂಚಾರ ಇದೇ ಜನವರಿ 8ರಿಂದ ಪುನಾರಂಭ

 ನವದೆಹಲಿ: ರೂಪಾಂತರಿ ಕೋವಿಡ್ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಭಾರತಬ್ರಿಟನ್ ವಿಮಾನ ಸಂಚಾರ ಇದೇ ಜನವರಿ 8ರಿಂದ ಪುನಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಕೊರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಭಾರತ ಹಾಗೂ ಬ್ರಿಟನ್ ನಡುವಣ ವಿಮಾನಯಾನ ಸೇವೆಯನ್ನು ಜನವರಿ 8ರಿಂದ ಪುನರಾರಂಭಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ‘ಭಾರತ ಹಾಗೂ ಬ್ರಿಟನ್ ವಿಮಾನಯಾನ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಜನವರಿ 8ರಿಂದ ಸೀಮಿತ ರೀತಿಯಲ್ಲಿ ಕಾರ್ಯಾಚರಣೆ ಪುನಾರಂಭಿಸಲಾಗುತ್ತದೆ. ಜನವರಿ 23ರ ವರೆಗೆ ವಾರಕ್ಕೆ 15 ವಿಮಾನಯಾನಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

TRENDING