Tuesday, January 19, 2021
Home ಜಿಲ್ಲೆ ಮೈಸೂರು 136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ : ರೋಹಿಣಿ ಸಿಂಧೂರಿ

ಇದೀಗ ಬಂದ ಸುದ್ದಿ

136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ : ರೋಹಿಣಿ ಸಿಂಧೂರಿ

 ಮೈಸೂರು: ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಿ ನಂತರ ಐದು ಲಕ್ಷ ಜನರಿಗೆ ಲಸಿಕೆ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.

ಕೊರೊನಾ ಲಸಿಕಾ ಡ್ರೈ ರನ್ ಆರಂಭ ಹಿನ್ನೆಲೆ ಮೈಸೂರಿನ ಜಯನಗರ ಆರೋಗ್ಯ ಲಸಿಕಾ ಕೇಂದ್ರದಲ್ಲಿ ಟೆಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮೂರು ಕೊಠಡಿಯ ಪೂರ್ವಭ್ಯಾಸದ ಸಿದ್ಧತೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿ ಏನು ಬರುತ್ತೆ ಅದನ್ನ ಮಾತ್ರ ಅನುಸರಿಸಿ ಲಸಿಕೆ ನೀಡುತ್ತೇವೆ. ಲಸಿಕೆ ಪಡೆದ ಮಾಹಿತಿ ಪಡೆದು ಅವರ ಮೇಲೆ‌ ನಿಗಾ ಇರಿಸುತ್ತೇವೆ ಎಂದಿದ್ದಾರೆ.

ಇನ್ನು ಮೈಸೂರಿನಲ್ಲಿ 32 ಸಾವಿರ ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲು ಕೊರೊನಾ ಲಸಿಕೆ ನೀಡುತ್ತೇವೆ. ಸದ್ಯಕ್ಕೆ ಮೂರು ಲಸಿಕಾ ಕೇಂದ್ರ ಸ್ಥಾಪನೆ ಮಾಡಿದ್ದೇವೆ. ಉಳಿದ್ದದ್ದು ಅಗತ್ಯಕ್ಕ ತಕ್ಕಂತೆ ನಿರ್ಮಾಣ ಮಾಡುತ್ತೇವೆ. ಲಸಿಕೆಗಾಗಿ ವಿಶೇಷ ಕೋಲ್ಡ್ ಸ್ಟೋರೆಜ್ ನಿರ್ಮಾಣದ ಅವಶ್ಯಕತೆ ಇಲ್ಲ. ನಮ್ಮಲ್ಲಿರುವ ಕೋಲ್ಡ್ ಸ್ಟೋರೆಜ್‌ನಲ್ಲೆ ಕೋವಿಡ್ ಲಸಿಕೆ ಶೇಖರಣೆ ಮಾಡಬಹುದು ಎಂದರು.

ಮೈಸೂರಿಗೆ ಬ್ರಿಟನ್ ಕೊರೊನಾ ಆತಂಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹುಶಃ ಮೈಸೂರಿನಲ್ಲಿ ಬ್ರಿಟನ್‌ನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರಿಗೆ ರೂಪಾಂತರ ಕೊರೊನಾ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದ್ದೇವೆ. ಅದರ ವರದಿಯ ಫಲಿತಾಂಶ ನಮಗೆ ತಿಳಿಸಿಲ್ಲ. ನಾವು ಎರಡು ಮೂರು ಬಾರಿ ಕೇಳಿದೇವು ಅವರು ಹೇಳಿಲ್ಲ. ಬಹುಶಃ ಅವರಿಗೆ ರೂಪಾಂತರ ಕೊರೊನಾ ವರದಿ ನೆಗೆಟಿವ್ ಇರಬಹುದು. ಸದ್ಯಕ್ಕೆ ಅವರನ್ನ ಬಿಟ್ಟರೆ 136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

TRENDING