Sunday, January 24, 2021
Home ಸುದ್ದಿ ಜಾಲ PF ಖಾತೆದಾರರಿಗೆ ಮೋದಿ ಸರ್ಕಾರದ ಬಂಪರ್‌ ಧಮಾಕಾ

ಇದೀಗ ಬಂದ ಸುದ್ದಿ

PF ಖಾತೆದಾರರಿಗೆ ಮೋದಿ ಸರ್ಕಾರದ ಬಂಪರ್‌ ಧಮಾಕಾ

 ದೇಶಾದ್ಯಂತ ಇರುವ ಆರು ಕೋಟಿಯಷ್ಟು ಇಪಿಎಫ್ ಚಂದಾದಾರರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೊಡ್ಡ ಧಮಾಕಾ ಘೋಷಿಸಿದೆ.

2019-20 ಸಾಲಿನ ಬಡ್ಡಿಗಾಗಿ ಕಾಯುತ್ತಿದ್ದ ಇಪಿಎಫ್‌ ಖಾತೆದಾರರಿಗೆ ಇಪಿಎಫ್‌ಒ ಬಡ್ಡಿಯನ್ನು ಜಮಾ ಮಾಡಲು ಆರಂಭಿಸಿದೆ. ಡಿಸೆಂಬರ್‌ 31ರಿಂದ ಪಿಎಫ್ ಚಂದಾದಾರರ ಖಾತೆಗಳಿಗೆ 8.5%ದಷ್ಟು ಬಡ್ಡಿ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೂಷ್ ಗಂಗ್ವಾರ್‌ ತಿಳಿಸಿದ್ದಾರೆ. ಇಂದಿನಿಂದಲೇ ಈ ಅನುಕೂಲಗಳು ಸಂಬಂಧಪಟ್ಟ ಮಂದಿಗೆ ದೊರಕಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಇಪಿಎಫ್‌ಓ ಚಂದಾದಾರರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ತಮ್ಮ ಖಾತೆಗಳಿಗೆ ಈ ಬಡ್ಡಿ ದುಡ್ಡು ಸಂದಾಯವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಎಸ್‌ಎಂಎಸ್, ಆನ್ಲೈನ್ ಹಾಗೂ ಉಮಾಂಗ್ ಕಿರು ತಂತ್ರಾಶಗಳಲ್ಲದೇ ಇಪಿಎಫ್‌ಓ ಸಹಾಯವಾಣಿಗೆ ಮಿಸ್ ಕಾಲ್ ಕೊಡುವ ಮೂಲಕ ಈ ವಿಷಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

TRENDING