Saturday, January 23, 2021
Home ಅಂತರ್ ರಾಷ್ಟ್ರೀಯ ಕೊರೋನಾ ಲಸಿಕೆ ಕುರಿತು ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಕಿಡಿ

ಇದೀಗ ಬಂದ ಸುದ್ದಿ

ಕೊರೋನಾ ಲಸಿಕೆ ಕುರಿತು ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಕಿಡಿ

ನವದೆಹಲಿ, ಜ.2- ಅಸ್ಟ್ರಾಜೆನಿಕಾ ಸಂಸ್ಥೆ ರೂಪಿಸಿರುವ ಕೊವಿಸೀಲ್ಡ್ ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವಸಂಸ್ಥೆಯೇ ಅನುಮತಿಸಿಲ್ಲ. ಹಾಗಿದ್ದರೂ ಭಾರತೀಯರು ಪ್ರಯೋಗ ಪಶುಗಳಾಗುವ ಹಂದಿಗಳೇ ಎಂದು ಬಿಜೆಪಿಯ ರಾಜ್ಯ ಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಕಿಡಿಕಾರಿದ್ದಾರೆ.

ಸರಣಿ ಟ್ವಿಟ್‍ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಜ್ಞಾನ ವಿಭಾಗದ ಪ್ರಧಾನ ಸಲಹೆಗಾರರಾದ ಡಾ.ವಿಜಯ ರಾಘವನ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ಧಾರೆ.

ವಿಜಯ್ ರಾಘವನ್ ಚೀನಾದ ಬಾವಲಿ ವೈರಸ್ ಪತ್ತೆಯಾದಾಗ ಸರ್ಕಾರದ ಪೂವಾನುಮತಿ ಇಲ್ಲದೆ ಚೀನಿಯರನ್ನು ನಾಗಾಲ್ಯಾಂಡ್‍ಗೆ ಕರೆ ತಂದು ಪ್ರಯೋಗ ಆರಂಭಿಸಿದ್ದರು. ಮೇಲಾಗಿ ರಾಷ್ಟ್ರೀಯ ತನಿಖಾ ದಳ ಐಪಿಸಿ 120 ಎ ಮತ್ತು ಬಿ, 121, 123 ಸೆಕ್ಷನ್‍ಗಳ ಅಡಿ ವಿಜಯ್ ರಾಘವನ್ ವಿರುದ್ದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ.

ಪ್ರಧಾನಿ ಅವರು ಯಾವುದೇ ನೇಮಕಾತಿ ಮಾಡುವ ಮುನ್ನಾ ಪೂರ್ವಾಪರ ವಿಚಾರಣೆ ನಡೆಸಬೇಕು. ನೇಮಕಾತಿಯ ಸಂಚಿನ ಹಿಂದೆ ರತನ್ ಟಾಟಾ ಅವರ ಕೈವಾಡ ಇದೆ ಎಂದು ಸುಬ್ರಹ್ಮಣ್ಯಸ್ವಾಮಿ ಆರೋಪಿಸಿದ್ದಾರೆ.

ನಾನು ಹೇಳುತ್ತಿರುವುದನ್ನು ನಿಜವಾದ ದೇಶ ಭಕ್ತರು ಮತ್ತು ಪ್ರಾಮಾಣಿಕ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಚಮಚಾ ವಿಜ್ಞಾನಿಗಳಿಗೆ ಇಷ್ಟವಾಗುವುದಿಲ್ಲ. ಆತ್ಮ ನಿರ್ಭರ ಯೋಜನೆಯಡಿ ಕೊರೊನಾ ಲಸಿಕೆ ಭಾರತ ಬಯೋ ಟೆಕ್‍ನಿಂದ ಬರಬೇಕು. ಇಲ್ಲಿ ತಯಾರಾದ ಲಸಿಕೆ ಬಿಲ್‍ಗೆಟ್ಸ್ ಅಥವಾ ಇಂಗ್ಲೆಂಡ್ ಲೇಬಲ್‍ನಿಂದ ಬರಬಾರದು ಎಂದಿದ್ದಾರೆ.
ಕೊವಿಡ್‍ಶೀಲ್ಡ್ ಲಸಿಕೆ ಅಂಗೀಕಾರದ ಹಿಂದೆ ಬ್ಲಾಕ್ ಮೇಲ್ ನಡೆದಿರಬಹುದಾ ಎಂದು ಅವರು ಪ್ರಶ್ನಿಸಿದ್ದಾರೆ.

TRENDING