Saturday, January 23, 2021
Home ಅಂತರ್ ರಾಜ್ಯ ಗುಜರಾತ್‍ನಲ್ಲಿ 1.44 ಕೋಟಿ ನಕಲಿ ನೋಟು ಹೊಂದಿದ್ದ ಇಬ್ಬರು ಅರೆಸ್ಟ್..!

ಇದೀಗ ಬಂದ ಸುದ್ದಿ

ಗುಜರಾತ್‍ನಲ್ಲಿ 1.44 ಕೋಟಿ ನಕಲಿ ನೋಟು ಹೊಂದಿದ್ದ ಇಬ್ಬರು ಅರೆಸ್ಟ್..!

ಅಹಮದಾಬಾದ್, ಜ.1- ನಗರದಲ್ಲಿ 1.44 ಕೋಟಿ ರೂ.ಗಳ ನಕಲಿ ನೋಟುಗಳನ್ನು ಹೊಂದಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ರೈಲ್ವೇ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಕಲುಪುರ್ ರೈಲು ನಿಲ್ದಾಣದ ಬಳಿ ರಾತ್ರಿ ಬಂಧಿಸಿದರೆ, ಮತ್ತೊಬ್ಬನನ್ನು ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮೊದಲ ಆರೋಪಿ ದೆಹಲಿ-ಅಹಮದಾಬಾದ್ ರಾಜಧಾನಿ ಎಕ್ಸ್‍ಪ್ರೆಸ್ ರೈಲಿನಿಂದ ಇಳಿದರೆ, ಮತ್ತೊಬ್ಬ ಅಹಮದಾಬಾದ್ ವಿಮಾನದಲ್ಲಿ, ದೆಹಲಿಯಿಂದ ಬಂದ ವಿಮಾನದಿಂದ ಇಳಿದಿದ್ದ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ನಗರದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದು, ಅವರ ಚಟುವಟಿಕೆಗಳನ್ನು ಪೊಲೀಸರು ಗಮನಿಸಿ ಬಂಧಿಸಿದ್ದಾರೆ. ಆರೋಪಿಗಳು ನಕಲಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಪ್ರಸಾರ ಮಾಡುವುದರಲ್ಲಿ ನಿಪುಣರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಪ್ರಥಮ ವ್ಯಕ್ತಿ ಗಾಂಧಿನಗರದ ಕಲೊಲ್ ಟೌನ್‍ನ ವಿಕಾಸ್ ಶರ್ಮ (31) ಎಂದು ಗುರುತಿಸಿದ್ದು, ಅವನ ಬಳಿಯಿದ್ದ ಬ್ಯಾಗನ್ನು ರೈಲ್ವೆ ಪೊಲೀಸರು ತಪಾಸನೆ ನಡೆಸಿ ಒಟ್ಟು 1.44 ಕೋಟಿ ರೂ. ಮೊತ್ತದ 7,240 ಎರಡು ಸಾವಿರದ (ಕರೆನ್ಸಿ) ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಶರ್ಮನನ್ನು ತನಿಖೆಗೊಳಪಡಿಸಿದಾಗ ರಾಜಸ್ಥಾನದ ಜೋಧಪುರದ ಹನ್ಸರಾಜ್ ಲೋಹರ್ ಎನ್ನುವ ವ್ಯಕ್ತಿ ಈ ನಕಲಿ ನೋಟು ಗಳನ್ನು ನೀಡಿದ್ದನೆಂದು ತಪ್ಪೋಪ್ಪಿಕೊಂಡಿದ್ದಾನೆ. ಆತನು ನೀಡಿದ ಸುಳಿವಿನ ಮೇರೆಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಎರಡನೇ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಎರಡನೇ ಆರೋಪಿ ನೀಡಿದ ಸುಳಿವಿನ ಆಧಾರದಲ್ಲಿ ದೆಹಲಿ ಪೊಲೀಸರು, ನಗರ ಹೋಟೆ ಲೊಂದರ ಮೇಲೆ ದಾಳಿ ನಡೆಸಿ ಪ್ರಿಂಟೆಡ್ ನಕಲಿ ನೋಟುಗಳು, ಲ್ಯಾಪ್‍ಟಾಪ್ ಹಾಗೂ ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಶ್ಚಿಮ ರೈಲ್ವೆ ಪೊಲೀಸ್ ಸೂಪರಿಂ ಟೆಂಡೆಂಟ್ ಪರಿಕ್ಷೀತ್ ರಾಥೋಡ್ ತಿಳಿಸಿದ್ದಾರೆ.

TRENDING