ಪೊಂಚ್: ಜಮ್ಮು-ಕಾಶ್ಮೀರದ ಪೊಂಚ್ ಜಿಲ್ಲೆಯಲ್ಲಿ ಗಡಿ ದಾಟಿದ ಪಾಕ್ ಆಕ್ರಮಿತ ಕಾಶ್ಮೀರದ 14 ವರ್ಷದ ಅಪ್ರಾಪ್ತ ಬಾಲಕನೊಬ್ಬನನ್ನು ವಿಶೇಷ ಕಾರ್ಯಾಚರಣೆ ತಂಡದ ಪೊಲೀಸರು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಅಲಿ ಹೈದರ್ ಎಂದು ಗುರುತಿಸಲ್ಪಟ್ಟ ಬಾಲಕನನ್ನು ಪೂಂಚ್ನ ಅಜೋಟೆ ಗ್ರಾಮದ ಬಳಿಯ ಬತಾರ್ ನಲ್ಲಾ ಸಮೀಪ ವಿಶೇಷ ಕಾರ್ಯಾಚರಣೆ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಬಾಲಕ ವಿಶೇಷ ಕಾರ್ಯಾಚರಣೆ ತಂಡದ ವಶದಲ್ಲಿದ್ದು, ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.