Tuesday, January 26, 2021
Home ದೇಶ ರಾಷ್ಟ್ರಪತಿ, ಪ್ರಧಾನಿಗೆ ನೂತನ ವರ್ಷದ ಶುಭ ಕೋರಿದ ರಷ್ಯಾ ಅಧ್ಯಕ್ಷ ‘ವ್ಲಾಡಿಮಿರ್ ಪುಟಿನ್’

ಇದೀಗ ಬಂದ ಸುದ್ದಿ

ರಾಷ್ಟ್ರಪತಿ, ಪ್ರಧಾನಿಗೆ ನೂತನ ವರ್ಷದ ಶುಭ ಕೋರಿದ ರಷ್ಯಾ ಅಧ್ಯಕ್ಷ ‘ವ್ಲಾಡಿಮಿರ್ ಪುಟಿನ್’

ಮಾಸ್ಕೋ: ಭೀತಿಯಿಂದಲೇ ಜೀವನ ಸಾಗಿಸಿದ 2020 ಮುಗಿದಿದ್ದು, ಇದೀಗ ನೂತನ ವರ್ಷಾರಂಭವಾಗಿದ್ದು, ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಹೊಸ ವರ್ಷದಲ್ಲಿ ಉಭಯ ದೇಶಗಳು ರಚನಾತ್ಮಕ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುತ್ತವೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಸಂಘಟಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

‘ರಷ್ಯಾ ಮತ್ತು ಭಾರತವು ಕಾರ್ಯತಂತ್ರದ ಸಹಭಾಗಿತ್ವದ ಸಂಬಂಧಗಳಿಂದ ಸಂಪರ್ಕ ಹೊಂದಿವೆ, ಇದು 2020ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಸೇರಿದಂತೆ ತೊಂದರೆಗಳು ಮತ್ತು ಸಮಸ್ಯೆಗಳ ಹೊರತಾಗಿಯೂ ವಿಶ್ವಾಸದಿಂದ ಅಭಿವೃದ್ಧಿ ಹೊಂದುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

TRENDING