Tuesday, January 26, 2021
Home ರಾಜ್ಯ ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್

 ಬೆಂಗಳೂರು: ಭಾರತ್ ಸ್ಟೇಜ್ 4 ವಾಹನಗಳ ನೋಂದಣಿಗೆ 2021 ರ ಜನವರಿ 1 ರಿಂದ 16 ರವರೆಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ 2020 ರ ಮಾರ್ಚ್ 31 ರೊಳಗೆ ಖರೀದಿಸಿ ನೋಂದಣಿಯಾಗದ ಬಿಎಸ್ 4 ವಾಹನಗಳನ್ನು ಜನವರಿ 1 ರಿಂದ 16 ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆ ವತಿಯಿಂದ ಕೊನೆಯ ಅವಕಾಶ ನೀಡಲಾಗಿದೆ.

ಭಾರತದಲ್ಲಿ ಬಿಎಸ್ 4 ವಾಹನಗಳ ನೋಂದಣಿ ಸ್ಥಗಿತವಾಗಿದೆ. ಕೊರೋನಾ ಕಾರಣದಿಂದ ಮಾರ್ಚ್ 31ಕ್ಕೆ ಮೊದಲು ಖರೀದಿಸಿದ ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ವಾಹನ ಪೋರ್ಟಲ್ ನಲ್ಲಿ ವಿವರ ನಮೂದಿಸಿ ನೊಂದಣಿಯಾಗದ ವಾಹನಗಳ ನೋಂದಣಿಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ನೋಂದಣಿ ಬಾಕಿ ಇರುವ ಬಿಎಸ್ 4 ವಾಹನಗಳ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ವಾಹನ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

TRENDING