Wednesday, January 27, 2021
Home ರಾಜ್ಯ ನಾಳೆಯಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್

ಇದೀಗ ಬಂದ ಸುದ್ದಿ

ನಾಳೆಯಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್

ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಅಭಿಯಾನದ ಡ್ರೈರನ್ ನಾಳೆಯಿಂದ (ಜ.2) ನಡೆಯಲಿದೆ. ವ್ಯಾಕ್ಸಿನ್ ನೀಡುವಾಗ ಅನುಸರಿಸಬೇಕಾದ ಹಂತಗಳ ಕುರಿತು ಡ್ರೈರನ್ ನಡೆಸಲಾಗುತ್ತಿದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ವ್ಯಾಕ್ಸಿನ್ ಹಾಕುವುದನ್ನು ಬಿಟ್ಟು ಉಳಿದೆಲ್ಲ ಹಂತಗಳನ್ನು ಯಾವ ರೀತಿ‌ ನಿಭಾಯಿಸಬೇಕು ಎಂಬುದನ್ನು ಡ್ರೈ ರನ್ ನಲ್ಲಿ ಪಾಲಿಸಲಾಗುತ್ತದೆ. ಕರ್ನಾಟಕದ 5 ಜಿಲ್ಲೆಗಳನ್ನು ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಗೆ ಆಯ್ಕೆ‌ ಮಾಡಲಾಗಿದೆ. ಆ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಯಲಿದೆ ಎಂದರು.

ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಯಲಿದೆ. ಲಸಿಕೆ ಬಂದ ಕೂಡಲೇ ಹೊಸ ವರ್ಷದಲ್ಲಿ ರಾಜ್ಯದ ಜನರಿಗೆ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

TRENDING