Tuesday, January 26, 2021
Home ದೇಶ ಭಾರತಕ್ಕೂ ಬಂತು ಲೈಟ್ ಹೌಸ್ ಪ್ರಾಜೆಕ್ಟ್- ಪ್ರಧಾನಿ ಮೋದಿ ಚಾಲನೆ

ಇದೀಗ ಬಂದ ಸುದ್ದಿ

ಭಾರತಕ್ಕೂ ಬಂತು ಲೈಟ್ ಹೌಸ್ ಪ್ರಾಜೆಕ್ಟ್- ಪ್ರಧಾನಿ ಮೋದಿ ಚಾಲನೆ

 ನವದೆಹಲಿ: ಮುಂದಿನ ವರ್ಷ ಆಚರಿಸುತ್ತಿರುವ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ದೇಶದಲ್ಲಿ ಪ್ರತಿಯೊಬ್ಬರೂ ಮನೆ ಹೊಂದುವ ಮೂಲಕ ಸತಂತ್ರವಾಗಿ ಬಾಳುವಂಥ ಅವಕಾಶವನ್ನು ಕಲ್ಪಿಸುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ನಿರ್ಮಾಣ ಆಗಿರುವ ಲೈಟ್​ ಹೌಸ್​ ಪ್ರಾಜೆಕ್ಟ್​ (ಹಗುರ ಮನೆ ಯೋಜನೆ) ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಪ್ರತಿಯೊಬ್ಬರಿಗೂ ಮನೆ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ಕೈಗೆಟಕುವ ದರದಲ್ಲಿ ಸ್ಥಿರವಾದ ಮನೆಗಳನ್ನು ನಿರ್ಮಿಸಿಕೊಡುವ ಆಶಾ-ಭಾರತ ಯೋಜನೆ ದೇಶದಲ್ಲಿ ಮುಂದುವರಿದಿದ್ದು, ಆಧುನಿಕ ತಂತ್ರಜ್ಞಾನಗಳ ಮೂಲಕ ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಸಂಶೋಧನೆ ಮತ್ತು ಸ್ಟಾರ್ಟ್ ಅಪ್ ಉದ್ಯಮಗಳ ಪ್ರಚಾರ ನಡೆಯುತ್ತಿದೆ ಎಂದು ಮೋದಿ ಹೇಳಿದರು.

ಈ ಯೋಜನೆಯಡಿ ಮನೆಗಳನ್ನು ಆರಂಭಿಕ ಹಂತಗಳಲ್ಲಿ ಇಂದೋರ್, ರಾಜ್​ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಮತ್ತು ಲಖನೌಗಳಲ್ಲಿ ನಿರ್ಮಿಸಲಾಗುತ್ತದೆ. ಪ್ರತಿ ಕಡೆಗಳಲ್ಲಿ ಸುಮಾರು ಸಾವಿರ ಮನೆಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಿಸಲಾಗುತ್ತದೆ.

ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ರಾಜ್ಯಗಳು ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ತುತ್ತಾಗಿವೆ. ಇಂತಹ ರಾಜ್ಯಗಳಿಗೆ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಹಗುರ ಮನೆಗಳು ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಸದ್ಯ ಈ ಮನೆಯನ್ನು ಇಂದೋರ್​ (ಮಧ್ಯ ಪ್ರದೇಶ), ರಾಜಕೋಟ್​ (ಗುಜರಾತ್​), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ), ಅಗರ್​ತಾಲಾ (ತ್ರಿಪುರ) ಮತ್ತು ಲಖನೌ (ಉತ್ತರ ಪ್ರದೇಶ) ಇಲ್ಲಿ ನಿರ್ಮಿಸಲಾಗುತ್ತದೆ.

ಏನಿದು ಲೈಟ್ಹೌಸ್ಪ್ರಾಜೆಕ್ಟ್ರ್?
ಲೈಟ್ ಹೌಸ್ ಪ್ರಾಜೆಕ್ಟ್‌ಗಳು (ಎಲ್‌ಎಚ್‌ಪಿ) ಮಾದರಿ ವಸತಿ ಯೋಜನೆಗಳಾಗಿವೆ, ಈ ಯೋಜನೆಯ ಅಡಿಯಲ್ಲಿ ಮನೆಗಳನ್ನು ಇಟ್ಟಿಗೆ ಮತ್ತು ಗಾರೆಗಳಿಂದ ನಿರ್ಮಿಸಲಾಗುವುದಿಲ್ಲ. ಬದಲಾಗಿ, ಪ್ರತಿಯೊಂದು ಪ್ರದೇಶದ ಭೌಗೋಳಿಕ-ಹವಾಮಾನ ಮತ್ತು ಅಪಾಯದ ಪರಿಸ್ಥಿತಿಗಳಿಗೆ ಸೂಕ್ತವಾದ ಕೆಲವು ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸಿ ಮನೆ ನಿರ್ಮಿಸಲಾಗುತ್ತದೆ.

ಚೀನಾ, ಆಸ್ಟ್ರೇಲಿಯಾ, ಆಫ್ರಿಕನ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿಯ ಭೌಗೋಳಿಕ-ಹವಾಮಾನ ಮತ್ತು ಅಪಾಯದ ಪರಿಸ್ಥಿತಿಗಳಿಗೆ ಸೂಕ್ತವಾದ ಕೆಲವು ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸಿ ಮನೆ ನಿರ್ಮಿಸಲಾಗಿದೆ. ಅದನ್ನೇ ಇಲ್ಲಿಯೂ ನಿರ್ಮಾಣ ಮಾಡುವ ಗುರಿ ಸರ್ಕಾರ ಹೊಂದಿದೆ.

TRENDING