ಭುವನೇಶ್ವರ, ಜ. 01: ಪುರಿಯಲ್ಲಿ ಜಗನ್ನಾಥ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ವಿಮಾನಯಾನ ಸಚಿವಾಲಯಕ್ಕೆ ಈ ಕುರಿತು ಒತ್ತಡ ಹೇರುವಂತೆ ಪ್ರಧಾನಿ ಮೋದಿಗೆ ನವೀನ್ ಪಟ್ನಾಯಕ್ ಪತ್ರ ಬರೆದಿದ್ದಾರೆ.
ಇಲ್ಲಿ ವಿಮಾನ ನಿಲ್ದಾಣ ಆರಂಭಿಸಿರುವುದರಿಂದ ಪುರಿ ಜಗನ್ನಾಥ ದೇವಾಲಯದ ಭಕ್ತರು ವಿಶ್ವದೆಲ್ಲೆಡೆಯಿಂದ ಆಗಮಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ. ಈಗಾಗಲೇ ಜಾಗವನ್ನು ನೋಡಲಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ವರ್ಷವೂ ಪುರಿ ಜಗನ್ನಾಥ ದವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪುರಿಯಿಂದ ಕೇವಲ 35 ಕಿ.ಮೀ ದೂರದಲ್ಲಿ ಕೊನಾರ್ಕ್ ದೇವಸ್ಥಾನವಿದೆ, ರಾಮಚಂಡಿ, ಚಂದ್ರಭಾಗಾ ಬೀಚ್ಗಳಿವೆ.ಇದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸತತ 9 ತಿಂಗಳಿಂದ ಮುಚ್ಚಲಾಗಿದ್ದ, ಪುರಿ ಜಗನ್ನಾಥ ದೇವಾಲಯ ಇಂದು ಬಾಗಿಲು ತೆರೆದಿದೆ.
ಕಳೆದ ತಿಂಗಳು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಧಿಕಾರಿ ಕೃಷನ್ ಕುಮಾರ್, ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಿಕೊಂಡು ಇಂದಿನಿಂದ ಹಂತಹಂತವಾಗಿ ದೇವಸ್ಥಾನದ ಬಾಗಿಲು ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದೆ ಎಂದರು.
12ನೇ ಶತಮಾನದ ದೇಶದ ಪ್ರಸಿದ್ಧ ಯಾತ್ರಾಸ್ಥಳ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶವನ್ನು ಮಾರ್ಚ್ 25ರಂದು ಮುಚ್ಚಲಾಗಿತ್ತು.