ನವದೆಹಲಿ: ಬಹು ನಿರೀಕ್ಷಿತ ಸಿಬಿಎಸ್ ಇ ಬೋರ್ಡ್ ಪರೀಕ್ಷೆ 2021ರ ದಿನಾಂಕಗಳನ್ನ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಪ್ರಕಟಿಸಿದ್ದಾರೆ. 10 ಮತ್ತು 12ನೇ ತರಗತಿ ಪರೀಕ್ಷೆಗಳು 2021ರ ಮೇ 4ರಂದು ಆರಂಭವಾಗಲಿದ್ದು, 2021ರ ಜೂನ್ 10ರೊಳಗೆ ಮುಕ್ತಾಯಗೊಳ್ಳಲಿದೆ. ಸಿಬಿಎಸ್ ಇ ಗುರುವಾರ ಬಿಡುಗಡೆ ಮಾಡಿರುವ ನೋಟಿಸ್ ಪ್ರಕಾರ, 10 ಮತ್ತು 12ನೇ ತರಗತಿಗಳ ದಿನಾಂಕ ಶೀಟನ್ನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಪರೀಕ್ಷೆಯಲ್ಲಿ ಶೇ.33ರಷ್ಟು ಆಂತರಿಕ ಆಯ್ಕೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಅಂಕ ಗಳಿಸಲು ಉತ್ತಮ ಅವಕಾಶ ಸಿಗಲಿದೆ. ಒಟ್ಟಾರೆ 80:20 ಅಂಕಗಳು, ಎಂದಿನಂತೆ ಅಂದ್ರೆ, 80 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನವು 20 ಅಂಕಗಳಿರುತ್ವೆ.
ಪ್ರಾಯೋಗಿಕ ಪರೀಕ್ಷೆಗಳು ಯಾವಾಗ ನಡೆಯುತ್ವೆ? ಸಿಬಿಎಸ್ ಇ ಯ ಅಧಿಕೃತ ಅಧಿಸೂಚನೆಯ ಪ್ರಕಾರ, 2021ರ ಮಾರ್ಚ್ 1ರಿಂದ ಎರಡು ತರಗತಿಗಳಿಗೆ ಪ್ರಾಯೋಗಿಕ/ಆಂತರಿಕ ಮೌಲ್ಯಮಾಪನ ನಡೆಸಲು ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಇದು ಸಿದ್ಧಾಂತ ಪರೀಕ್ಷೆಗಳನ್ನ ನಡೆಸಲು ಕೊನೆಯ ದಿನಾಂಕದವರೆಗೆ ನಡೆಯುತ್ತೆ. 10ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳಿಗೂ ಇದು ಅನ್ವಯವಾಗಲಿದೆ. ಮಂಡಳಿಯು ಸಾಮಾನ್ಯವಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು/ ಆಂತರಿಕ ಮೌಲ್ಯಮಾಪನವನ್ನ ಜನವರಿಯಲ್ಲಿ ನಡೆಸುತ್ತದೆ. ಆದರೆ ಫೆಬ್ರವರಿಯಿಂದ ಸಿದ್ಧಾಂತ ಪರೀಕ್ಷೆಗಳು ಪ್ರಾರಂಭವಾಗುತ್ತವೆ. 2021ರ ಇತ್ತೀಚಿನ ಮಾದರಿ ಪೇಪರ್ʼಗಳು ಮತ್ತು ಮಾರ್ಕಿಂಗ್ ಸ್ಕೀಮ್ ಅನ್ನು ಪರಿಶೀಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಮಾಧ್ಯಮವರದಿಗಳ ಪ್ರಕಾರ, ಆನ್ ಲೈನ್ ಲ್ಯಾಬ್ ಅಥವಾ ಓ-ಲ್ಯಾಬ್ ಗಳ ಬದಲಿಗೆ ಶಾಲಾ ಲ್ಯಾಬ್ ಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನ ನಡೆಸಲಾಗುವುದು ಎಂದು ಆಯ್ದ ಶಾಲಾ ಪ್ರಾಂಶುಪಾಲರೊಂದಿಗಿನ ಸಭೆಯಲ್ಲಿ ಮಂಡಳಿ ಸ್ಪಷ್ಟಪಡಿಸಿದೆ.