Friday, January 22, 2021
Home ದೆಹಲಿ ದೆಹಲಿಯಲ್ಲಿ ಕಳೆದ 15 ವರ್ಷಗಳಲ್ಲಿ ಕಂಡಿರದ ಕನಿಷ್ಠ ತಾಪಮಾನ ದಾಖಲು

ಇದೀಗ ಬಂದ ಸುದ್ದಿ

ದೆಹಲಿಯಲ್ಲಿ ಕಳೆದ 15 ವರ್ಷಗಳಲ್ಲಿ ಕಂಡಿರದ ಕನಿಷ್ಠ ತಾಪಮಾನ ದಾಖಲು

 ನವದೆಹಲಿ, ಜ.01: ದೆಹಲಿಯಲ್ಲಿ ಕಳೆದ 15 ವರ್ಷಗಳಲ್ಲಿ ಕಂಡಿರದ ಕನಿಷ್ಠ ತಾಪಮಾನ ದಾಖಲಾಗಿದೆ.1.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ವರ್ಷ ಜನವರಿಯಲ್ಲಿ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಈ ತಾಪಮಾನ ಸಫ್ತರ್‌ಜಂಗ್‌ನಲ್ಲಿ ದಾಖಲಾಗಿದೆ. 2006ರ ಜನವರಿ 8 ರಂದು 0.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.ನಾಳೆಯಿಂದ ಕನಿಷ್ಠ ಉಷ್ಣಾಂಶ ಹೆಚ್ಚಾಗಲು ಆರಂಭವಾಗುತ್ತದೆ. ಜನವರಿ 2 ರಿಂದ ಜನವರಿ 6ರವರೆಗೂ ಕನಿಷ್ಠ ಉಷ್ಣಾಂಶ ಹೆಚ್ಚಾಗಲಿದೆ. ಜನವರಿ 4-5ರ ಸಮಯದಲ್ಲಿ 8 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.

ತುಂಬಾ ದಟ್ಟವಾದ ಮಂಜಿರುವುದರಿಂದ ಗೋಚರತೆ 0 ಮತ್ತು 50 ಮೀಟರ್ ನಡುವೆ ಇದೆ. ಗುರುವಾರ ದೆಹಲಿಯಲ್ಲಿ 3.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಡಿಸೆಂಬರ್ 18 ರಂದು 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು.

ದೆಹಹಲಿಯಲ್ಲಿ ದಾಖಲೆಯ ಚಳಿ ಅನುಭವವಾಗುತ್ತಿದೆ, ಅದೆಷ್ಟೆ ಬೆಚ್ಚಗಿನ ಬಟ್ಟೆ, ಜರ್ಕಿನ್ ಧರಿಸಿದರೂ ಕೊರೆವ ಚಳಿಗೆ ಸಾಕಾಗುತ್ತಿಲ್ಲ, ಮುಂದಿನ ಕೆಲವು ದಿನಗಳ ಕಾಲ ಮಂಜು ಆವರಿಸಿದ ವಾತಾವರಣ ಕೂಡ ಕಂಡುಬರಲಿದೆ.

TRENDING