Wednesday, January 20, 2021
Home ಕೋವಿಡ್-19 ನಾಳೆ ಬೆಂಗಳೂರಿನ 3 ಕಡೆ ಕೋವಿಡ್ ಲಸಿಕೆ ಹಂಚಿಕೆ ತಾಲೀಮು,ಎಲ್ಲೆಲ್ಲಿ ಇಲ್ಲಿದೆ ಮಾಹಿತಿ

ಇದೀಗ ಬಂದ ಸುದ್ದಿ

ನಾಳೆ ಬೆಂಗಳೂರಿನ 3 ಕಡೆ ಕೋವಿಡ್ ಲಸಿಕೆ ಹಂಚಿಕೆ ತಾಲೀಮು,ಎಲ್ಲೆಲ್ಲಿ ಇಲ್ಲಿದೆ ಮಾಹಿತಿ

 ಬೆಂಗಳೂರು,ಜ.1- ದೇಶದಲ್ಲಿ ಕೋವಿಡ್-19 ಲಸಿಕೆ ವಿತರಣೆ ಮಾಡುವ ಸಂಬಂಧ ಜನವರಿ 2 ರಂದು ಎಲ್ಲಾ ರಾಜ್ಯಗಳಲ್ಲಿಯೂ ಕೊರೋನಾ ನಿಯಂತ್ರಣ ಲಸಿಕೆಯ ತಾಲೀಮು(ಡ್ರೈರನ್) ನಡೆಯಲಿದೆ. ಈ ಸಂಬಂಧ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ತಾಲೀಮು ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಡಳಿಧಿಕಾರಿ ಗೌರವ್ ಗುಪ್ತಾ ತಿಳಿಸಿದರು.

ಪಾಲಿಕೆ ವ್ಯಾಪ್ತಿಯ 2 ಬೆಂಗಳೂರು ನಗರ ಗ್ರಾಮಾಂತರ ಪ್ರದೇಶದ 1 ಕಡೆ ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ನಗರ ಗ್ರಾಮಾಂತರ ಭಾಗದ ಹರ್ಗಾದೆಯಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಎರಡು ತಾಸು ಲಸಿಕೆ ತಾಲೀಮು ನಡೆಯಲಿದ್ದು, 1 ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 25 ಮಂದಿ ಆರೋಗ್ಯ ಕಾರ್ಯಕರ್ತನ್ನು ಗುರುತಿಸಲಾಗಿದ್ದು, 3 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ 75 ಕಾರ್ಯಕರ್ತರಿಗೆ ಲಸಿಕೆ ತಾಲೀಮು ನಡೆಸಲಾಗುತ್ತದೆ.

ತಾಲೀಮು ನಡೆಸುವ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ನಗರದಲ್ಲಿ ಒಟ್ಟು 1,517 ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜನವರಿ ಅಂತ್ಯದೊಳಗೆ ಅಧಿಕೃತವಾಗಿ ಲಸಿಕೆ ನೀಡುವ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

TRENDING