Monday, January 25, 2021
Home ಕೋವಿಡ್-19 ದೇಶದಲ್ಲಿ ಮತ್ತೆ ನಾಲ್ವರಿಗೆ ರೂಪಾಂತರಿ ಕೊರೊನಾ ವೈರಸ್

ಇದೀಗ ಬಂದ ಸುದ್ದಿ

ದೇಶದಲ್ಲಿ ಮತ್ತೆ ನಾಲ್ವರಿಗೆ ರೂಪಾಂತರಿ ಕೊರೊನಾ ವೈರಸ್

ಬೆಂಗಳೂರು : ಈಗಾಗಲೇ ರಾಜ್ಯ ರಾಜಧಾನಿಯ 7 ಜನರಿಗೆ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿದ್ದನ್ನು ಐಸಿಎಂಆರ್ ವರದಿಯಿಂದ ದೃಢಪಟ್ಟಿತ್ತು. ಇದೀಗ ಇಂದು ಮತ್ತೆ ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ದೇಶದ ನಾಲ್ವರಿಗೆ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿರುವಂತೆ ನಾಲ್ವರು ಬ್ರಿಟನ್ ವೈರಸ್ ಸೋಂಕಿತರಲ್ಲಿ ಬೆಂಗಳೂರಿನ ಮೂವರು ಸೇರಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಈ ಮೊದಲು 7 ಸೋಂಕಿತರ ಜೊತೆಗೆ ಮತ್ತೆ ಹೊಸದಾಗಿ ಮೂವರಿಗೆ ಇಂದು ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿದ್ದರಿಂದಾಗಿ, ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

TRENDING