Monday, January 25, 2021
Home ರಾಜಕೀಯ ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ :ಡಿ.ಕೆ ಶಿವಕುಮಾರ್

ಇದೀಗ ಬಂದ ಸುದ್ದಿ

ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ :ಡಿ.ಕೆ ಶಿವಕುಮಾರ್

ಬೆಂಗಳೂರು: ಶಾಲೆ ಮುಚ್ಚಬೇಕು ಅಂತ ನಾನು ಹೇಳುವುದಿಲ್ಲ, ಶಾಲೆಗೆ ಬಹಳ ದಿನ ಬ್ರೇಕ್ ಹಾಕಬಾರದು, ಮಕ್ಕಳ ವರ್ತನೆ ಬದಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಶಾಲೆ ಆರಂಭವಾಗಿರುವ ಹಿನ್ನೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಶಿಕ್ಷಣದ ಮೇಲೆ ಸಮಸ್ಯೆ ಉಂಟಾಗುತ್ತದೆ. ಕೋವಿಡ್ ನಿಯಮ ಪಾಲನೆ ಮಾಡಿ ಓಪನ್ ಮಾಡಲಿ. ಮಾಡದೇ ಹೋದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ಬ್ರಿಟನ್​ನಿಂದ ಬಂದವರು ಎಸ್ಕೇಪ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಕ್ಕೆ ಬೇಸಿಕ್ ಕಾಮನ್ ಸೆನ್ಸ್ ಇರಬೇಕಿತ್ತು. ಏರ್​ಪೋರ್ಟ್​ನಲ್ಲಿ ಹಿಡಿದು ಚೆಕ್ ಮಾಡಿಸಬೇಕಿತ್ತು. ಚೆಕ್ ಮಾಡೋಕೆ ಇವರಿಗೆ ಏನು ಕಷ್ಟವಾಗ್ತಿತ್ತು. ಇವತ್ತು ಜನರ ಆತಂಕಕ್ಕೆ ಕಾರಣವಾಗಿದ್ದಾರೆ. ಆಡಳಿತ ವಿಚಾರದಲ್ಲಿ ಇವರು ಫೆಲ್ಯೂರ್ ಆಗಿದ್ದಾರೆ. ನಮ್ಮ ರಾಜ್ಯದವರು ಕೋವಿಡ್ ಹರಡಲಿಲ್ಲ, ಅವತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ತೆಗೆದುಕೊಂಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದಿದ್ದಾರೆ.

ಇನ್ನು ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ. ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ. ಅವರ ಹೇಳಿಕೆ ಬೇರೆ ಅರ್ಥ ಕೊಡುತ್ತಿದೆ. ಈಗಲೂ ಅವರೇ ಸಿಎಂ ಆಗಿದ್ದಾರೆ. ಅವರು ಸಿಎಂ ಅಲ್ಲ ಅಂತ ಯಾರು ಹೇಳಿಲ್ವಲ್ಲಾ(?) ಮತ್ತೆ ಮತ್ತೆ ನಾನೇ ಸಿಎಂ ಎಂದು ಹೇಳೋದೇಕೆ(?) ಎಂದು ಸಿಎಂ ಹೇಳಿಕೆಯನ್ನು ಡಿಕೆಶಿ ವ್ಯಂಗ್ಯವಾಡಿದ್ದಾರೆ.

TRENDING