Wednesday, January 27, 2021
Home ಜಿಲ್ಲೆ ಬೆಂಗಳೂರು ಜ.9ರಿಂದ 3 ದಿನ ಸಿಎಂ ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಸ

ಇದೀಗ ಬಂದ ಸುದ್ದಿ

ಜ.9ರಿಂದ 3 ದಿನ ಸಿಎಂ ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಸ

 ಬೆಂಗಳೂರು,ಜ.1-ಯಾವುದೇ ಸಂದರ್ಭದಲ್ಲಿ ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಬಹುದೆಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದೇ 9ರಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಜ.9ರಿಂದ 11ರವರೆಗೆ ರಾಯಚೂರು, ಬೀದರ್ ಹಾಗೂ ಬೆಳಗಾವಿಗೆ ಭೇಟಿ ಕೊಡಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮತದಾರರ ಮೂಗಿಗೆ ತುಪ್ಪ ಸವರುವ ಪ್ರಯತ್ನಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಈ ಹಿಂದೆ ಬಿಹಾರ ವಿಧಾನಸಭಾ ಚುನಾವಣೆ ನಂತರ ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡುವುದಾಗಿ ಆಯೋಗ ತಿಳಿಸಿತ್ತು.

ಈಗ ರಾಜ್ಯದಲ್ಲಿ ಗ್ರಾಪಂ ಚುನಾವಣೆಗಳು ಮುಗಿದಿರುವ ಕಾರಣ ಈ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವರು. ಇದರ ಸುಳಿವು ಅರಿತಿರುವ ಬಿಎಸ್‍ವೈ ಅವರು, ಈ ಮೂರು ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವರು.

ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಬೀಗುತ್ತಿದ್ದು, ಈ ಮೂರು ಕ್ಷೇತ್ರಗಳಲ್ಲೂ ಗೆದ್ದು ಜನಾದೇಶ ತಮ್ಮ ಪರವಾಗಿದೆ ಎಂಬುದನ್ನು ಬಿಂಬಿಸಲು ಭಾರೀ ತಂತ್ರ ಹೆಣೆದಿದೆ. ತಮ್ಮ ನಾಯಕ್ವದ ವಿರುದ್ಧ ಪದೇ ಪದೇ ಅಪಸ್ವರ ಕೇಳಿ ಬರುತ್ತಿರುವುದರಿಂದ ಮೂರು ಕ್ಷೇತ್ರಗಳನ್ನು ಗೆದ್ದು ತಮ್ಮ ವಿರುದ್ಧ ಯಾರೊಬ್ಬರೂ ಸೊಲ್ಲೆತ್ತದಂತೆ ರಣತಂತ್ರವನ್ನು ಸಿಎಂ ನಡೆಸಿದ್ದಾರೆ. ಹೀಗಾಗಿಯೇ ಈ ಬಾರಿ ಉತ್ತರಕರ್ನಾಟಕಕ್ಕೆ ಅವರು ಭೇಟಿ ಕೊಡುತ್ತಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

TRENDING