Wednesday, January 20, 2021
Home ಸುದ್ದಿ ಜಾಲ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೋವಿಡ್-19ನಿಂದ ಸಂಪೂರ್ಣ ಗುಣಮುಖ

ಇದೀಗ ಬಂದ ಸುದ್ದಿ

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೋವಿಡ್-19ನಿಂದ ಸಂಪೂರ್ಣ ಗುಣಮುಖ

 ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಈ ಬಗ್ಗೆ ಭಾನುವಾರ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ನಡ್ಡಾ, ನನ್ನ ಅನಾರೋಗ್ಯದ ಸಮಯದಲ್ಲಿ ನನಗಾಗಿ ಶುಭ ಹಾರೈಸಿದ, ಪ್ರಾರ್ಥಿಸಿದ ಮತ್ತು ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನನ್ನ ಕುಟುಂಬ ಹಾಗೂ ನಾನು ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ.

ಈ ಸವಾಲಿನ ಸಮಯದಲ್ಲಿ ನನಗೆ ಆರೈಕೆ ನೀಡಿದ ಡಾ. ರಣದೀಪ್ ಗುಲೇರಿಯ ಹಾಗೂ ದಿರ್ ಏಮ್ಸ್ ಮತ್ತು ಅಲ್ಲಿನ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು. ಈ ಮೊದಲು ಹೊಸ ವರ್ಷದ ಶುಭಾಶಯ ಕೋರಿರುವ ಜೆ.ಪಿ. ನಡ್ಡಾ, ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ವರ್ಷಾಂತ್ಯದಲ್ಲಿ ಡಿಸೆಂಬರ್ ಎರಡನೇ ವಾರದಲ್ಲಿ ಜೆ.ಪಿ.ನಡ್ಡಾ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಪಶ್ಚಿಮ ಬಂಗಾಳ ಪ್ರವಾಸದ ಬಳಿಕ ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೆ ಒಳಗಾಗಿದ್ದರು. ಬಳಿಕ ತಮ್ಮೊಂದಿಗೆ ಸಂಪರ್ಕ ಬಂದವರು ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದರು.

TRENDING