Monday, January 25, 2021
Home ಸುದ್ದಿ ಜಾಲ ರಾಜೀನಾಮೆ ಹಿಂದಿನ ಸತ್ಯ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಇದೀಗ ಬಂದ ಸುದ್ದಿ

ರಾಜೀನಾಮೆ ಹಿಂದಿನ ಸತ್ಯ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

 ಚಿಕ್ಕಮಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಏಕಾಏಕಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಖಡಕ್ ಐಪಿಎಸ್ ಅಧಿಕಾರಿಯ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ವರ್ಷಗಳ ಬಳಿಕ ತಾವು ರಾಜೀನಾಮೆ ನೀಡಲು ಕಾರಣ ಯಾರು? ಅದರ ಹಿಂದಿನ ರಹಸ್ಯವೇನು ಎಂಬುದನ್ನು ಅಣ್ಣಾಮಲೈ ಬಿಚ್ಚಿಟ್ಟಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗಡೆ ಅವರ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ಸಿದ್ಧಾರ್ಥಣ್ಣ ಹೇಳಿದ್ದಕ್ಕೆ ನಾನು ರಾಜೀನಾಮೆ ನೀಡಿದೆ. ರಾಜೀನಾಮೆಗೂ ಮುನ್ನ ನಾವಿಬ್ಬರು ಕುಳಿತು ಚರ್ಚಿಸಿದ್ದೆವು ಎಂದು ಹೇಳಿದ್ದಾರೆ.

ನನಗೆ ಡಿಐಜಿ, ಐಜಿ ಆಗಿ ಎಸಿ ರೂಂ ನಲ್ಲಿ ಕುಳಿತು ಕೆಲಸ ಮಾಡಲು ಇಷ್ಟವಿರಲಿಲ್ಲ. ಜನಸಾಮಾನ್ಯರ ಬದುಕಲ್ಲಿ ಬದಲಾವಣೆ ತರುವುದೇ ನನ್ನ ಉದ್ದೇಶವಾಗಿತ್ತು. ಹಾಗಾಗಿ ರಾಜೀನಾಮೆ ಕೊಡುವ ಬಗ್ಗೆ ಯೋಚಿಸುತ್ತಿದ್ದೆ. ಈ ವೇಳೆ ಸಿದ್ದಾರ್ಥ್ ಅಣ್ಣ ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ. ರಾಜೀನಾಮೆ ಬಳಿಕ ಜನ ನಿಮ್ಮನ್ನು ಮೂರ್ಖ ಎನ್ನಬಹುದು ಆದರೆ ನಿಮ್ಮ ಉದ್ದೇಶದ ಬಗ್ಗೆ ನನಗೆ ಗೊತ್ತು. ಧೈರ್ಯವಾಗಿ ಮುಂದುವರಿಯಿರಿ ಎಂದು ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.

TRENDING