Saturday, January 16, 2021
Home ಅಂತರ್ ರಾಷ್ಟ್ರೀಯ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ಉದ್ರಿಕ್ತರ ಗುಂಪು

ಇದೀಗ ಬಂದ ಸುದ್ದಿ

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ಉದ್ರಿಕ್ತರ ಗುಂಪು

ಉದ್ರಿಕ್ತರ ಗುಂಪೊಂದು ಹಿಂದೂ ದೇವಾಲಯವೊಂದನ್ನು ಧ್ವಂಸ ಮಾಡಿರುವ ಘಟನೆ ಪಾಕಿಸ್ತಾನದ ಖೈಬರ್ಫಂಖ್ತುಕ್ವಾ ಪ್ರಾಂತ್ಯದಲ್ಲಿ ನಡೆದಿದೆ. ಕರಕ್ ಜಿಲ್ಲೆಯ ತೇರಿ ಪ್ರದೇಶದಲ್ಲಿ ಘಟನೆ ನಡೆದಿದೆ. ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ.

ದೇವಾಲಯದ ಕಟ್ಟಡ ವಿಸ್ತರಣೆಗೆ ಸ್ಥಳೀಯ ಆಡಳಿತದಿಂದ ಹಿಂದೂಗಳು ಅನುಮತಿ ಪಡೆದಿದ್ದರಂತೆ. ಆದರೆ ಸ್ಥಳೀಯ ಧರ್ಮಗುರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸಾವಿರಾರು ಜನರನ್ನು ಸೇರಿಸಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ದೇವಾಲಯವನ್ನು ಧ್ವಂಸ ಮಾಡುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು ಎನ್ನಲಾಗಿದೆ. ಘಟನೆಯನ್ನು ಅವಮಾನಕರ ಎಂದಿರುವ ಹಲವು ಮಂದಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಈ ದೇಶದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯವಾಗಿದೆ ಎಂದಿದ್ದಾರೆ.

TRENDING