Sunday, January 24, 2021
Home ರಾಜಕೀಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಶಾಸಕ ಯತ್ನಾಳ್ ಪತ್ರ

ಇದೀಗ ಬಂದ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಶಾಸಕ ಯತ್ನಾಳ್ ಪತ್ರ

ಬೆಂಗಳೂರುವಿಭಾಗಾವಾರು ಸಭೆ ಸೇರಿದ ಸಂದರ್ಭದಲ್ಲಿ ಶಾಸಕರು ಅನುದಾನ ಬಿಡುಗಡೆ ಮಾಡುವಂತೆ ಸಲ್ಲಿಸಿದ್ದರು ಆದರೆ ಇನ್ನೂ ಸಿಎಂ ಅನುದಾನ ಬಿಡುಗಡೆ ಮಾಡಿಲ್ಲ ಇದರಿಂದ ಶಾಸಕರ ಮನಸ್ಸಿಗೆ ನೋವಾಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಅವರಿಗೆ ಪತ್ರ ಬರೆದಿದ್ದಾರೆ.

ನನ್ನ ಮತ ಕ್ಷೇತ್ರದ ಅನೇಕ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಲ್ಲ, ಶಾಸಕರು ಮುಖ್ಯಮಂತ್ರಿಗಳ ಭೇಟಿಗೆ ಹೋದರೆ ಸಿಗುತ್ತಿಲ್ಲ, ಬಹುಶಃ ಅದು ಅವರ ಅನಾರೋಗ್ಯದ ದೃಷ್ಟಿಯಿಂದ ಸಿಗುತ್ತಿಲ್ಲ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲೂ ಶಾಸಕರನ್ನು ಕಡೆಗಣಿಸಿದ್ದಾರೆ ಇದರಿಂದ ಅನೇಕ ಕಾರ್ಯಕರ್ತರಿಗೆ ನೋವಾಗಿದೆ. ಆದ್ದರಿಂದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಜನವರಿ 4 ಅಥವಾ 5 ರಂದು ಇಡೀ ದಿನ ಬಿಜೆಪಿ ಶಾಸಕಾಂಗ ಸಭೆ ಕರೆಯಿರಿ. ಶಾಸಕರ ಅಹವಾಲುಗಳು ಹಾಗೂ ಅಭಿವೃದ್ಧಿ ಪರ ಕಾರ್ಯಕೆಲಸಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ನೀಡಿ ಎಂದು ಒತ್ತಾಯಿಸುತ್ತೇನೆ ಎಂದು ಸಿಎಂ ಬಿಎಸ್​ವೈ ​ವಿರುದ್ಧ ಯತ್ನಾಳ್ ಅವರು ಪತ್ರದ ಮುಖೇನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

TRENDING