Monday, January 25, 2021
Home ಬೆಂಗಳೂರು ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಾಸ್ ದರ ಶೇ. 20 ರಷ್ಟು ಕಡಿತ

ಇದೀಗ ಬಂದ ಸುದ್ದಿ

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಾಸ್ ದರ ಶೇ. 20 ರಷ್ಟು ಕಡಿತ

ಬೆಂಗಳೂರು: ಬಿಎಂಟಿಸಿ ಬಸ್ ಗಳ ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸ್ ಹೊಂದಿದವರು ಹವಾನಿಯಂತ್ರಿತ ವಜ್ರ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಜನವರಿ 1 ರಿಂದ ಬಿಎಂಟಿಸಿ ಸಾಮಾನ್ಯ ಬಸ್ ಪಾಸ್ ಹಾಗೂ ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸ್ ಹೊಂದಿದವರು ಪ್ರತಿ ಭಾನುವಾರ ಹವಾನಿಯಂತ್ರಿತ ವಜ್ರ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ವಜ್ರ ಬಸ್ ಗಳ ದೈನಂದಿನ ಪಾಸ್, ಪ್ರಯಾಣ ದರ ಮತ್ತು ಮಾಸಿಕ ಪಾಸ್ ದರದಲ್ಲಿ ಶೇಕಡ 20 ರಷ್ಟು ಕಡಿತಗೊಳಿಸಲಾಗಿದೆ. ಸಾಮಾನ್ಯ ಬಸ್ ಗಳಲ್ಲಿ ಸಂಚರಿಸಲು ಪಡೆದುಕೊಂಡ ಮಾಸಿಕ ಪಾಸ್ ಮತ್ತು ಹಿರಿಯ ನಾಗರಿಕರ ಪಾಸ್ ಬಳಸಿಕೊಂಡು ಎಸಿ ಬಸ್ ಗಳಲ್ಲಿ ಪ್ರಯಾಣಿಸಬಹುದು. ಪ್ರಸ್ತುತ 2363 ರೂಪಾಯಿ ಇರುವ ವಜ್ರ ಬಸ್ ಮಾಸಿಕ ಪಾಸ್ ದರವನ್ನು ಕಡಿಮೆ ಮಾಡಿದ್ದು 2000 ರೂಪಾಯಿಗೆ ಇಳಿಸಲಾಗಿದೆ. ದೈನಂದಿನ ಪಾಸ್ ದರವನ್ನು 147 ರೂಪಾಯಿಯಿಂದ 120 ರೂ.ಗೆ ಇಳಿಕೆ ಮಾಡಲಾಗಿದೆ.

TRENDING