Wednesday, January 27, 2021
Home ದೆಹಲಿ ಕೋವಿಡ್ ರೋಗಿಗಳೊಂದಿಗೆ ಹೆಜ್ಜೆ ಹಾಕಿದ ದೆಹಲಿ ವೈದ್ಯರು

ಇದೀಗ ಬಂದ ಸುದ್ದಿ

ಕೋವಿಡ್ ರೋಗಿಗಳೊಂದಿಗೆ ಹೆಜ್ಜೆ ಹಾಕಿದ ದೆಹಲಿ ವೈದ್ಯರು

ದೆಹಲಿಯ ಅತಿದೊಡ್ಡ ಕೊರೊನಾ ವೈರಸ್​ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಕೊರೊನಾ ರೋಗಿಗಳ ಜೊತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗ ಮಾಡೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ರು.

ಇದೀಗ ಮತ್ತೊಂದು ಕೋವಿಡ್​ ಕೇರ್​ ಕೇಂದ್ರದಲ್ಲಿ ರೋಗಿಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.

ವಿಡಿಯೋದಲ್ಲಿ ಕೊರೊನಾ ರೋಗಿಗಳ ಜೊತೆ ಪಿಪಿಇ ಕಿಟ್​ ಧರಿಸಿದ ವೈದ್ಯರು ನೃತ್ಯ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ರೋಗಿಗಳ ಮನೋಸ್ಥೈರ್ಯವನ್ನ ಹೆಚ್ಚಿಸಲು ಬೆಂಗಳೂರು, ಕಾನ್ಪುರ್ ಹಾಗೂ ಚೆನ್ನೈ ಸೇರಿದಂತೆ ಹಲವೆಡೆ ವೈದ್ಯರು ನೃತ್ಯ ಮಾಡಿದ ವಿಡಿಯೋಗಳು ಸುದ್ದಿ ಮಾಡಿದ್ದವು. ಇಂತಹ ಗಂಭೀರ ಸನ್ನಿವೇಶದ ನಡುವೆಯೂ ಒತ್ತಡ ನಿವಾರಣೆಗೆ ವೈದ್ಯರು ಕೈಗೊಂಡ ಈ ಕ್ರಮ ಜನ ಮೆಚ್ಚುಗೆಗೆ ಪಾತ್ರವಾಗ್ತಿದೆ.

ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರ ಭಾರತದಲ್ಲಿ ಕೊರೊನಾ ವೈರಸ್ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯ ದೆಹಲಿಯಾಗಿದೆ. ನಗರ-ರಾಜ್ಯದ ಜನಸಂಖ್ಯೆಯ ಸುಮಾರು ಕಾಲು ಭಾಗವು ಈವರೆಗೆ ಕೋವಿಡ್-19 ನಿಂದ ಬಳಲಿದೆ.

TRENDING