ವಾಷಿಂಗ್ಟನ್: ಅಮೆರಿಕದಲ್ಲಿ ಭಯ ಹುಟ್ಟಿಸಿದಂತಹ ಸರಣಿ ಹಂತಕ ಎಂದೇ ಕುಖ್ಯಾತಿ ಪಡೆದಿದ್ದ ೯೦ ಕ್ಕೂ ಹೆಚ್ಚು ಕೊಲೆ ಮಾಡಿದ್ದ ಸ್ಯಾಮ್ಯುಯೆಲ್ ಲಿಟ್ಟಲ್ (80) ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಸ್ಯಾಮ್ಯುಯೆಲ್ ಅನಾರೋಗ್ಯ ಕಾರಣ ಇಲ್ಲಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಯಾಮ್ಯುಯೆಲ್, 4 ದಶಕಗಳಲ್ಲಿ ಅಮೆರಿಕದ 19 ರಾಜ್ಯಗಳಲ್ಲಿ 93 ಜನರನ್ನು ಹತ್ಯೆ ಮಾಡಿದ್ದ. ಇವನನ್ನು 2014ರಲ್ಲಿ ಪೊಲೀಸರು ಬಂಧಿಸಿದ್ದರು. ಇವನ ಮೇಲೆ ಸಾಕಷ್ಟು ಕೊಲೆ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
2014ರಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ ಡಿಎನ್ಎ ಹೊಂದಾಣಿಕೆಯಾಗಿತ್ತು. 93 ಜನರನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯದ ಎದುರು ತಪ್ಪು ಒಪ್ಪಿಕೊಂಡಿದ್ದ ಎಂದು ತಿಳಿದು ಬಂದಿದೆ.