Sunday, January 24, 2021
Home ಸುದ್ದಿ ಜಾಲ ರಾಜಕೀಯ ಒತ್ತಡದ ಮೂಲಕ ಕುರುಬ ಮೀಸಲಾತಿ ಪಡೆಯಬೇಕು: ಸಚಿವ ಈಶ್ವರಪ್ಪ

ಇದೀಗ ಬಂದ ಸುದ್ದಿ

ರಾಜಕೀಯ ಒತ್ತಡದ ಮೂಲಕ ಕುರುಬ ಮೀಸಲಾತಿ ಪಡೆಯಬೇಕು: ಸಚಿವ ಈಶ್ವರಪ್ಪ

ದಾವಣಗೆರೆ: ರಾಜಕೀಯ ಒತ್ತಡ ಇಲ್ಲದಿದ್ದರಿಂದ ST ಮೀಸಲಾತಿ ಸಿಕ್ಕಿಲ್ಲ. ಹೋರಾಟದ ಮೂಲಕ ಕುರುಬರು ಮೀಸಲಾತಿ ಪಡೀಬೇಕು ಎಂದು ಕುರುಬ ST ಮೀಸಲಾತಿ ಚಿಂತನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ರು.

ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಶಾಖಾ ಮಠದಲ್ಲಿ ಚಿಂತನಾ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ಅವರು ಮೀಸಲು ಹೋರಾಟ ಯಾವ ಜನಾಂಗದ ವಿರುದ್ಧವೂ ಅಲ್ಲ. ಎಲ್ಲ ಸಮುದಾಯಗಳ ಪರ ನಾವು ಹೋರಾಟ ಮಾಡುತ್ತೇವೆ. ಪ್ರಧಾನಿಗೆ ಕುರುಬ ಸಮಾಜದ ಬೇಡಿಕೆ ಅರ್ಥೈಸುವ ಪ್ರಯತ್ನ ಮಾಡಿದ್ದೇವೆ. ಇದೀಗ ನಮ್ಮ ಶಕ್ತಿ ಪ್ರದರ್ಶನ ಮಾಡುವ ಆಗತ್ಯತೆ ಇದೆ ಎಂದು KS ಈಶ್ವರಪ್ಪ ತಿಳಿಸಿದ್ರು.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಪರೋಕ್ಷ ವಾಗ್ದಾಳಿ
ನಮ್ಮವರು ಮಂತ್ರಿ ಆಗಿದ್ದಾರೆ, ಮುಖ್ಯಮಂತ್ರಿ ಆಗಿದ್ದಾರೆ. ಆದರೆ ನಮ್ಮ ಕೆಲಸ ಆಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು. ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತೇವೆ. ಫೆ.7ರಂದು ಬೆಂಗಳೂರಿನಲ್ಲಿ ST ಹೋರಾಟ ಸಮಾವೇಶ ನಡೆಯಲಿದೆ. ಈ ಹೋರಾಟದಲ್ಲಿ ಕನಿಷ್ಠ 10 ಲಕ್ಷ ಜನರು ಸೇರಬೇಕು ಈಶ್ವರಪ್ಪ ಸಭೆಯಲ್ಲಿ ಹೇಳಿದ್ರು.

TRENDING