Saturday, January 23, 2021
Home ಕೋವಿಡ್-19 ಕೋವಿಡ್-19 ಲಸಿಕೆಯ ವದಂತಿಗಳನ್ನು ನಂಬಬೇಡಿ : ಪ್ರಧಾನಿ ಮೋದಿ ಮನವಿ

ಇದೀಗ ಬಂದ ಸುದ್ದಿ

ಕೋವಿಡ್-19 ಲಸಿಕೆಯ ವದಂತಿಗಳನ್ನು ನಂಬಬೇಡಿ : ಪ್ರಧಾನಿ ಮೋದಿ ಮನವಿ

ನವದೆಹಲಿ : ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ಅಭಿಯಾನ ನಡೆಸಲು ಭಾರತ ಸಿದ್ಧತೆ ನಡೆಸುತ್ತಿದೆ, ಕೊರೋನ ಲಸಿಕೆ ವದಂತಿಗಳನ್ನು ನಂಬಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಗುಜರಾತ್ ನ ರಾಜ್ ಕೋಟ್ ನಲ್ಲಿ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಪ್ರಧಾನಿ ‘ದೇಶದಲ್ಲಿ ಈಗ ಹೊಸ ಕೋವಿಡ್ -19 ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ. ಮುಂದಿನ ವರ್ಷ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಡೆಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

ಲಸಿಕೆ ಅಭಿಯಾನದ ಸಂದರ್ಭದಲ್ಲಿ ಉದ್ಭವಿಸಬಹುದಾದ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ‘ನಮ್ಮ ದೇಶದಲ್ಲಿ ವದಂತಿಗಳು ಬೇಗ ಹರಡುತ್ತಿವೆ. ವೈಯಕ್ತಿಕ ಲಾಭಕ್ಕಾಗಿ ಅಥವಾ ಬೇಜವಾಬ್ದಾರಿಯ ವರ್ತನೆಯಿಂದ ವಿವಿಧ ವದಂತಿಗಳನ್ನು ಜನ ಹಬ್ಬಿಸುತ್ತಾರೆ. ಲಸಿಕೆ ಆರಂಭವಾದಾಗ ವದಂತಿಹಬ್ಬಿಸಬಹುದು, ಕೆಲವರು ಈಗಾಗಲೇ ಆರಂಭಿಸಿದ್ದಾರೆ’ ಎಂದು ಅವರು ಹೇಳಿದರು.

ಕೋವಿಡ್ ವಿರುದ್ಧ ಹೋರಾಡುವುದು ದೇಶದ ಜನರಿಗೆ ನಾನು ಮನವಿ ಮಾಡುತ್ತೇನೆ. ಇಂತಹ ವದಂತಿಗಳ ಬಗ್ಗೆ ಎಚ್ಚರವಹಿಸಿ, ಜವಾಬ್ದಾರಿಯುತ ನಾಗರಿಕರು ಯಾವುದೇ ಪರಿಶೀಲನೆ ನಡೆಸದೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುವುದನ್ನು ಬಿಟ್ಟು’ ಎಂದು ಹೇಳಿದರು.

TRENDING