Saturday, January 16, 2021
Home ಸುದ್ದಿ ಜಾಲ ಗ್ರಾ.ಪಂ.ಚುನಾವಣೆ ಫಲಿತಾಂಶದ ಬಗ್ಗೆ ಸಮಾಧಾನವಿದೆ : ಡಿ.ಕೆ. ಶಿ

ಇದೀಗ ಬಂದ ಸುದ್ದಿ

ಗ್ರಾ.ಪಂ.ಚುನಾವಣೆ ಫಲಿತಾಂಶದ ಬಗ್ಗೆ ಸಮಾಧಾನವಿದೆ : ಡಿ.ಕೆ. ಶಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಗೆದ್ದಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶದ ಬಗ್ಗೆ ನನಗೆ ಸಮಾಧಾನವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಪಕ್ಷದವರೇ ಗೆದ್ದರು ಎಂದು ಹೇಗೆ ಗುರುತಿಸುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಗೆದ್ದಿದ್ದಾರೆ. ಸಿಎಂ‌ ಯಡಿಯೂರಪ್ಪ ನವರಿಗೆಗೆ ನಾನು ಪಟ್ಟಿ ಕೊಡಬಲ್ಲೆ ಎಂದರು.

ಮೀಸಲಾತಿ ಬಳಸಿ ಗ್ರಾಮ ಪಂಚಾಯತಿಗಳನ್ನ ಹಿಡಿಯಲು ಬಿಜೆಪಿ ಮುಂದಾಗಬಹುದು. ಆದರೆ ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಅನ್ನೋದು‌ ನಿಮಗೆ ಗೊತ್ತಾಗಲಿದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ಗೆದ್ದಿರುವ ಬಗ್ಗೆ ಹೇಳುತ್ತಿದ್ದಾರೆ. ಆಡಳಿತದಲ್ಲಿರುವ ಸರ್ಕಾರಗಳು ಬೈ ಎಲೆಕ್ಷನ್ ಗೆಲ್ಲೋದು ಸಹಜ. ನಮ್ಮ ಸರ್ಕಾರವಿದ್ದಾಗ ನಾವು ಬೈ ಎಲೆಕ್ಷನ್ ಗೆದ್ದಿರುವ ಪಟ್ಟಿಕೊಡಬೇಕೆ ಎಂದು ಪ್ರಶ್ನಿಸಿದ ಅವರು 2021 ಕಾಂಗ್ರೆಸ್ ಕಾರ್ಯಕರ್ತರಿಗೆ ಹೋರಾಟದ ವರ್ಷ, ಮುಂದೆ ಪಕ್ಷ ಅಧಿಕಾರಕ್ಕೆ‌ ತರಲು, ಪಕ್ಷ ಸಂಘಟನಾತ್ಮಕವಾಗಿ ಹೋರಾಟ ನಡೆಸಲಿದೆ ಎಂದು ಹೇಳಿದರು.

TRENDING