Wednesday, January 27, 2021
Home ಸುದ್ದಿ ಜಾಲ 'ಸಾಲು ಮರದ ತಿಮ್ಮಕ್ಕ' ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್

ಇದೀಗ ಬಂದ ಸುದ್ದಿ

‘ಸಾಲು ಮರದ ತಿಮ್ಮಕ್ಕ’ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು : ಪರಿಸರ ಪ್ರೇಮಿಸಾಲು ಮರದ ತಿಮ್ಮಕ್ಕಇಂದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

ಕಳೆದ ಭಾನುವಾರದಂದು ವೃಕ್ಷಮಾತೆ ಡಾ.ಸಾಲುಮರದ ತಿಮ್ಮಕ್ಕ ಆಕಸ್ಮಿಕವಾಗಿ ಬಿದ್ದ ಕಾರಣ, ಸೊಂಟದ ಮೂಳೆಗೆ ಪೆಟ್ಟಾಗಿತ್ತು. ಆದ್ದರಿಂದ ಸಾಲುಮರದ ತಿಮ್ಮಕ್ಕನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು,. ಈ ದೇಶ ಈ ಜಗತ್ತು ಕಂಡಂತಹ ಮಹಾನ್ ತಾಯಿ ಪದ್ಮಶ್ರೀ, ನಾಡೋಜ. ವೃಕ್ಷ ಮಾತೆ ಡಾ. ಸಾಲುಮರದ ತಿಮ್ಮಕ್ಕ ಭಾನುವಾರ ಸಂಜೆ 4ಗಂಟೆಯಲ್ಲಿ ಆಕಸ್ಮಿಕವಾಗಿ ಬಿದ್ದ ಕಾರಣ ಸೊಂಟದ ಮೂಳೆ ಸ್ವಲ್ಪ ವ್ಯತ್ಯಾಸವಾಗಿತ್ತು. ಹೀಗಾಗಿ ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಸೊಂಟದ ಮೂಳೆಯನ್ನು ವೈದ್ಯರು ಸರಿ ಮಾಡಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಹಿನ್ನೆಲೆ ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..

TRENDING