ಬೆಂಗಳೂರು, ಡಿ.30- ಬ್ರಿಟನ್ನಿಂದ ಬಂದು ನಾಪತ್ತೆಯಾಗಿದ್ದ 202 ಮಂದಿಯನ್ನು ಪತ್ತೆಹಚ್ಚುವಲ್ಲಿ ಬಿಬಿಎಂಪಿ ಕಡೆಗೂ ಸಫಲವಾಗಿದೆ. ಕಳೆದ ವಾರ ಬ್ರಿಟನ್ನಿಂದ ಆಗಮಿಸಿದ್ದ ಪ್ರಯಾಣಿಕರು ತಪ್ಪು ವಿಳಾಸ ಕೊಟ್ಟು ನಗರದ ಬೇರೆಡೆ ವಾಸವಾಗಿದ್ದರು. ಅವರ ಪತ್ತೆಗೆ ಆರೋಗ್ಯ ಇಲಾಖೆ ಮತ್ತು ಪಾಲಿಕೆ ಹರಸಾಹಸ ಪಟ್ಟಿದ್ದವು. ಪೊಲೀಸ್ ಇಲಾಖೆ ಸಹಾಯದಿಂದ ಬಹುತೇಕ ಮಂದಿಯನ್ನು ಪಾಲಿಕೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪತ್ತೆ ಹಚ್ಚಿರುವ ಬಹುತೇಕ ಮಂದಿಯ ಸ್ವಾಬ್ ಟೆಸ್ಟ್ಗೆ ಮುಂದಾಗಿದ್ದು, ಅವರ ಮನೆಗಳ ಬಳಿಗೇ ತೆರಳಿ ಸ್ವಾಬ್ ಟೆಸ್ಟ್ ಮಾಡಲಾಗುತ್ತಿದ್ದು, ಸಂಜೆ ವೇಳೆಗೆ ಇದರ ವರದಿ ಬರಲಿದೆ. ನಾಪತ್ತೆಯಾಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆ, ನಾಪತ್ತೆಯಾಗಿದ್ದುದು ಯಾವ ಕಾರಣಕ್ಕೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಅವರನ್ನು ಪ್ರಶ್ನಿಸಲಿದ್ದಾರೆ.