Saturday, January 23, 2021
Home ಅಂತರ್ ರಾಜ್ಯ ಸಂಜಯ್ ರಾವತ್ ಪತ್ನಿಗೆ 3ನೇ ಬಾರಿ ಇಡಿ ನೋಟಿಸ್

ಇದೀಗ ಬಂದ ಸುದ್ದಿ

ಸಂಜಯ್ ರಾವತ್ ಪತ್ನಿಗೆ 3ನೇ ಬಾರಿ ಇಡಿ ನೋಟಿಸ್

ಪುಣೆ, ಡಿ.30- ಶಿವಸೇನೆಯ ರಾಜಕೀಯ ಎದುರಾಳಿಗಳಿಗೆ ಖಡಕ್ ತಿರುಗೇಟು ನೀಡುವ ಮೂಲಕ ಚರ್ಚೆಯಲ್ಲಿರುವ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಪಂಜಾಬ್-ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ನಡೆದಿದೆ ಎನ್ನಲಾದ 4,355 ಕೋಟಿ ರೂ.ಗಳ ಹಗರಣದ ವಿಚಾರಣೆಗೆ ಹಾಜರಾಗುವಂತೆ ವರ್ಷಾ ಅವರಿಗೆ ಮೂರನೇ ಬಾರಿ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.

ಈ ಮೊದಲು ಎರಡು ಬಾರಿ ನೋಟಿಸ್ ನೀಡಿದ್ದರೂ ವರ್ಷಾ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ದೂರ ಉಳಿದಿದ್ದರು. ಜನವರಿ 5ರವರೆಗೂ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಮತ್ತೊಮ್ಮೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ ಜ.5ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಪಂಜಾಬ್-ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕಾರಣಕ್ಕಾಗಿ ಆರ್‍ಬಿಐ ನಗದು ವಿತ್‍ಡ್ರಾವಲ್ ಮೇಲೆ ಕಳೆದ ವರ್ಷ ಮಿತಿ ಹೇರಿಕೆ ಮಾಡಿತ್ತು. ಬ್ಯಾಂಕ್‍ನ ಹಗರಣದಲ್ಲಿ ಪ್ರಮುಖ ಪಾತ್ರ ಹೊಂದಿದೆ ಎಂದು ಹೇಳಲಾದ ಹೌಸಿಂಗ್ ಡೆವಲಪ್‍ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‍ನ 3830 ಕೋಟಿ ರೂ. ಮೌಲ್ಯದ ಚಿರ ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿಮಾಡಿದೆ.

TRENDING