Saturday, January 23, 2021
Home ಅಂತರ್ ರಾಜ್ಯ ಪುರಸಭೆ ಅಧ್ಯಕ್ಷ ಸ್ಥಾನದಿಂದ ಸೌಮೇಂದು ಅಧಿಕಾರಿ ವಜಾ

ಇದೀಗ ಬಂದ ಸುದ್ದಿ

ಪುರಸಭೆ ಅಧ್ಯಕ್ಷ ಸ್ಥಾನದಿಂದ ಸೌಮೇಂದು ಅಧಿಕಾರಿ ವಜಾ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮಾಜಿ ಸಚಿವ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸಹೋದರ ಸೌಮೇಂದು ಅವರನ್ನು ಪುರ್ಬಾ ಮದಿನಿಪುರ ಜಿಲ್ಲೆಯ ಕಾಂತಿ ಪುರಸಭೆಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಇತ್ತೀಚಿಗೆ ಪುರ್ಬಾ ಮದಿನಿಪುರ ಜಿಲ್ಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಆಯೋಜಿಸಿದ್ದ ರಾಜಕೀಯ ಕಾರ್ಯಕ್ರಮಗಳಲ್ಲಿ ಸೌಮೇಂದು ಅಧಿಕಾರಿ ಅವರು ಭಾಗವಹಿಸಿಲ್ಲ. ಅಲ್ಲದೆ ತಮ್ಮ ಸಹೋದರ ಸುವೇಂದು ಅಧಿಕಾರಿಯ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಟಿಎಂಸಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಸೌಮೇಂದು ಅಧಿಕಾರಿ ಅವರ ಮತ್ತೊಬ್ಬ ಸಹೋದರ, ಟಿಎಂಸಿ ಸಂಸದ ದೆಬೆಂದು ಅಧಿಕಾರಿ ಅವರು ‘ಈ ಕ್ರಮವನ್ನು ದುರದೃಷ್ಟಕರ, ಅನಿರೀಕ್ಷಿತ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.

‘ನಾನು ಸದಾ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ. ಈ ವಿಷಯವನ್ನು ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಿಳಿಸುತ್ತೇನೆ. ಅವರು ನಮ್ಮ ನಾಯಕಿ, ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ.

TRENDING