Wednesday, January 27, 2021
Home ದೆಹಲಿ ಮತ್ತೆ ಇಡಿ ವಿಚಾರಣೆಗೆ ಗೈರಾದ ಸಂಜಯ್ ರಾವತ್ ಪತ್ನಿ

ಇದೀಗ ಬಂದ ಸುದ್ದಿ

ಮತ್ತೆ ಇಡಿ ವಿಚಾರಣೆಗೆ ಗೈರಾದ ಸಂಜಯ್ ರಾವತ್ ಪತ್ನಿ

 ನವದೆಹಲಿ: ಪಿಎಂಸಿ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಮತ್ತೆ ವಿಚಾರಣೆಗೆ ಗೈರಾಗಿದ್ದಾರೆ.

4,300 ಕೋಟಿ ರೂ ಮೌಲ್ಯದ ಪಿಎಂಸಿ ಬ್ಯಾಂಕಿಂಗ್ ಹಗರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ನೊಟೀಸ್ ಪಡೆದಿರುವ ಸಂಜಯ್ ರಾವತ್ ಪತ್ನಿ ವರ್ಷ ರಾವತ್ ಇಂದು ಇಡಿ ಮುಂದೆ ಹಾಜರಾಗಿಲ್ಲ. ಇ.ಡಿ ವಿಚಾರಣೆಗೆ ಹಾಜರಾಗಲು ಜನವರಿ 5 ತನಕ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ವರ್ಷಾ ರಾವತ್ ಅವರ ಮನವಿಗೆ ಸ್ಪಂದಿಸಿರುವ ಇಡಿ ಅಧಿಕಾರಿಗಳು ಮುಂದಿನ ವಿಚಾರಣೆಗೆ ಹಾಜರಾಗುವಾಗ ವೈಯುಕ್ತಿಕ ಮತ್ತು ಆರ್ಥಿಕ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಬಳಿಕ ವರ್ಷಾ ರಾವತ್ ಮತ್ತು ಸಂಜಯ್ ರಾವತ್ ರನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

TRENDING