Saturday, January 16, 2021
Home ಸುದ್ದಿ ಜಾಲ ಮದುವೆ ಊಟ ಮಾಡಿ 22 ಮಂದಿ ಅಸ್ವಸ್ಥ:ಆಸ್ಪತ್ರೆಗೆ ದಾಖಲು

ಇದೀಗ ಬಂದ ಸುದ್ದಿ

ಮದುವೆ ಊಟ ಮಾಡಿ 22 ಮಂದಿ ಅಸ್ವಸ್ಥ:ಆಸ್ಪತ್ರೆಗೆ ದಾಖಲು

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥರು ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಫಲವನಹಳ್ಳಿ ಗ್ರಾಮದ ಸೀತಾ ನಾಯ್ಕ ಅವರ ಪುತ್ರನ ವಿವಾಹ ಸೋಮವಾರ ನಡೆದಿದ್ದು, ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಆದರೆ ಊಟ ಮಾಡಿದ 22 ಮಂದಿಗೆ ರಾತ್ರಿ ವಾಂತಿ, ಭೇದಿ, ತಲೆಸುತ್ತು ಕಾಣಿಸಿಕೊಂಡಿದ್ದು, ಮೊದಲಿಗೆ ಅವರಿಗೆ ಸವಳಂಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಬಳಿಕ ಆಂಬುಲೆನ್ಸ್ ಮೂಲಕ ನ್ಯಾಮತಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಅಡುಗೆ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TRENDING