Wednesday, January 20, 2021
Home ಅಂತರ್ ರಾಜ್ಯ ತಮಿಳುನಾಡು ರಜನಿಯಂತೆ ಕಮಲ್ ಹಾಸನ್ ಕೂಡ ರಾಜಕೀಯ ತೊರೆಯಬೇಕು: ಸಚಿವ ಸೆಲ್ಲೂರ್ ರಾಜು

ಇದೀಗ ಬಂದ ಸುದ್ದಿ

ರಜನಿಯಂತೆ ಕಮಲ್ ಹಾಸನ್ ಕೂಡ ರಾಜಕೀಯ ತೊರೆಯಬೇಕು: ಸಚಿವ ಸೆಲ್ಲೂರ್ ರಾಜು

ಮಧುರೈತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಮುನ್ನವೇ ರಾಜಕೀಯ ತ್ಯಜಿಸುವ ನಿರ್ಧಾರವನ್ನು ಸ್ವಾಗತಿಸಿದ ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರು, ನಟ ಕಮಲ್ ಹಾಸನ್ ಕೂಡ ಇದನ್ನೆ ಮಾಡಬೇಕು ಎಂದು ಹೇಳಿದ್ದಾರೆ.

“ರಜನಿಕಾಂತ್ ಅವರು ತಮ್ಮ ಆರೋಗ್ಯ ಮತ್ತು ಅವರ ರಾಜಕೀಯ ಪ್ರಯಾಣದಲ್ಲಿ ಅವರೊಂದಿಗೆ ಬಂದವರ ಕಲ್ಯಾಣವನ್ನು ಪರಿಗಣಿಸಿ ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರಂತೆ ಕಮಲ್ ಹಾಸನ್ ಸಹ ರಾಜಕೀಯ ತೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

‘ಉಲಗ ನಾಯಗನ್'(ಕಮಲ್ ಹಾಸನ್) ಸಿನಿಮಾ ಉದ್ಯಮಕ್ಕೆ ಮಾತ್ರ ಅನ್ವಯಿಸುತ್ತದೆ, ರಾಜಕೀಯಕ್ಕೆ ಅಲ್ಲ, ಅದರಲ್ಲಿ ಅವರಿಗೆ ಪರಿಣತಿಯ ಕೊರತೆಯಿದೆ ಎಂದ ಸಚಿವರು, ನಟರು ಚಿತ್ರರಂಗದಲ್ಲಿ ಬದಲಾವಣೆಗಳನ್ನು ತರಬಹುದು. ಆದರೆ ರಾಜಕೀಯದಲ್ಲಿ ಬದಲಾವಣೆಗಳನ್ನು ತರುವ ಸಮಯ ಅಥವಾ ವಯಸ್ಸು ಅವರ ಪರವಾಗಿಲ್ಲ ಎಂದು ಹೇಳಿದ್ದಾರೆ.

ತಾವು ಅಧಿಕಾರಕ್ಕೆ ಬಂದರೆ ಮಾಜಿ ಎಐಎಡಿಎಂಕೆ ಮುಖ್ಯಸ್ಥ ಎಂ.ಜಿ.ರಾಮಚಂದ್ರನ್ ಅವರಂತೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದ ಕಮಲ್ ಹಾಸನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಜು, ಚಿತ್ರರಂಗದಿಂದ ಬಂದವರೆಲ್ಲರೂ ಎಂಜಿಆರ್ ಆಗಲು ಸಾಧ್ಯವಿಲ್ಲ. ಡಿಎಂಕೆ ನಾಯಕ ಎಂ ಕರುಣಾನಿಧಿ ಅವರು 20 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದರೂ, ಅವರು ಮತ್ತು ಇತರೆ ಯಾವುದೇ ರಾಜಕಾರಣಿಗಳು ‘ಕಲೈನಾರ್ ಆಡಳಿತ’ದ ವಾಗ್ದಾನ ಮಾಡಲಿಲ್ಲ ಎಂದರು.

TRENDING