Monday, January 25, 2021
Home ಸುದ್ದಿ ಜಾಲ ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ : CBDT

ಇದೀಗ ಬಂದ ಸುದ್ದಿ

ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ : CBDT

ನವದೆಹಲಿ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಜನರು ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಮತ್ತೆ 2021ರ ಫೆಬ್ರುವರಿ 15ರವರೆಗೆ ವಿಸ್ತರಿಸಿರುವುದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬುಧವಾರ (ಡಿಸೆಂಬರ್ 30, 2020) ತಿಳಿಸಿದೆ.

ಅದೇ ರೀತಿ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು 2021ರ ಜನವರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಯಾವ ತೆರಿಗೆದಾರರ ಲೆಕ್ಕಪತ್ರಗಳನ್ನು ಅಡಿಟ್ ಮಾಡಬೇಕಾದ ಅಗತ್ಯವಿದೆಯೋ ಅವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ಈ ಮೊದಲು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139)1)ರ ಅನ್ವಯ 2020ರ ಅಕ್ಟೋಬರ್ 31ರವರೆಗೆ ವಿಸ್ತರಿಸಿತ್ತು. ನಂತರ ನವೆಂಬರ್ 30ರವರೆಗೆ ಹಾಗೂ 2021ರ ಜನವರಿ 31ರವರೆಗೆ ವಿಸ್ತರಿಸಿದ್ದು, ಇದೀಗ ಫೆಬ್ರುವರಿ 15ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದೆ.

TRENDING