Saturday, January 16, 2021
Home ದೆಹಲಿ SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ದೇಶದ ಅತೀದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಚೆಕ್ʼಗಳಿಗೆ ಸಕಾರಾತ್ಮಕ ವೇತನ ವ್ಯವಸ್ಥೆಯನ್ನ ಜಾರಿಗೆ ತರಲು ಸಿದ್ಧತೆ ನಡೆಸಿತ್ತು. ಆದ್ರೆ, ಹೊಸ ನಿಯಮದ ಪ್ರಕಾರ, ಪ್ರಮುಖ ವಿವರಗಳ ಮರು-ದೃಢೀಕರಣವು ₹50,000ಕ್ಕಿಂತ ಹೆಚ್ಚಿನ ಹಣ ಪಾವತಿಗಳಿಗೆ ಅಗತ್ಯವಿದೆ.

ಈ ಹೊಸ ಚೆಕ್ ಪಾವತಿ ನಿಯಮ 1 ಜನವರಿ 2021ರಿಂದ ಜಾರಿಗೆ ಬರಲಿದ್ದು, ‘ಆರ್ ಬಿಐ ಮಾರ್ಗಸೂಚಿಗಳ ಪ್ರಕಾರ, ಚೆಕ್ ನೀಡುವವರು ಚೆಕ್ ಪಾವತಿಗಳಿಗೆ ಸಂಬಂಧಿಸಿದಂತೆ ಚೆಕ್ ಸಂಖ್ಯೆ, ಚೆಕ್ ಮೊತ್ತ, ಚೆಕ್ ದಿನಾಂಕ, ಪಾವತಿ ಹೆಸರು ಮುಂತಾದ ವಿವರಗಳನ್ನ ಒದಗಿಸಬೇಕಾದ ಹೆಚ್ಚುವರಿ ಭದ್ರತೆಯನ್ನ ಖಚಿತಪಡಿಸಿಕೊಳ್ಳಲು ನಾವು ಧನಾತ್ಮಕ ವೇತನ ವ್ಯವಸ್ಥೆ (PPS)ಯನ್ನ ಪರಿಚಯಿಸುತ್ತಿದ್ದೇವೆ ಎಂದು ವೆಬ್ಸೈಟ್ʼನಲ್ಲಿ ಎಸ್ಬಿಐ ಉಲ್ಲೇಖಿಸಿದೆ.

ಪಾಸಿಟಿವ್ ಪೇ ಸಿಸ್ಟಮ್ ಆಯ್ಕೆಯನ್ನ ತಮ್ಮ ಗ್ರಾಹಕರಿಗೆ ಪರಿಚಯಿಸಿದ ಎಸ್ ಬಿಐ, ಯಾವುದೇ ಪ್ರಶ್ನೆಯಿದ್ದರೆ ತಮ್ಮ ಹತ್ತಿರದ ಶಾಖೆಯನ್ನ ಸಂಪರ್ಕಿಸಲು ಸೂಚಿಸಿದೆ.

ಎರಡು ತಿಂಗಳ ಹಿಂದೆ ಚೆಕ್ʼಗಾಗಿ ‘ಸಕಾರಾತ್ಮಕ ವೇತನ ಪದ್ಧತಿ’ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ಧರಿಸಿತ್ತು. ಗ್ರಾಹಕರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಳ್ಳಲು ಮತ್ತು ಚೆಕ್ ಪಾವತಿಗೆ ಸಂಬಂಧಿಸಿದಂತೆ ವಂಚನೆ ಮತ್ತು ದುರುಪಯೋಗ ಪ್ರಕರಣಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಗಸ್ಟ್ʼನಲ್ಲಿ ತಿಳಿಸಿದ್ರು. ಇನ್ನು ಕೇಂದ್ರೀಯ ಬ್ಯಾಂಕ್ ಕೂಡ ಸಕಾರಾತ್ಮಕ ವೇತನ ವ್ಯವಸ್ಥೆಯ ವೈಶಿಷ್ಟ್ಯಗಳ ಬಗ್ಗೆ ತಮ್ಮ ಗ್ರಾಹಕರಿಗೆ ಸಾಕಷ್ಟು ಜಾಗೃತಿ ಮೂಡಿಸಲು ಬ್ಯಾಂಕ್ʼಗಳಿಗೆ ಸಲಹೆ ನೀಡಿತ್ತು.

ಪಾಸಿಟಿವ್ ಪೇ ಸಿಸ್ಟಮ್ ಎಂದರೇನು..?
ಪಾಸಿಟಿವ್ ಪೇ ಪರಿಕಲ್ಪನೆಯು ದೊಡ್ಡ ಮೌಲ್ಯದ ಚೆಕ್ʼಗಳ ಪ್ರಮುಖ ವಿವರಗಳನ್ನ ಮರು ದೃಢೀಕರಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಚೆಕ್ ವಿತರಿಸುವವರು ವಿದ್ಯುನ್ಮಾನವಾಗಿ, ಎಸ್ ಎಂಎಸ್, ಮೊಬೈಲ್ ಆಯಪ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಇತ್ಯಾದಿಗಳ ಮೂಲಕ, ಆ ಚೆಕ್ʼನ ಕೆಲವು ಕನಿಷ್ಠ ವಿವರಗಳನ್ನ (ಉದಾಹರಣೆಗೆ, ಫಲಾನುಭವಿಯ ಹೆಸರು / ಪಾವತಿದಾರನ ಹೆಸರು, ಮೊತ್ತ ಇತ್ಯಾದಿ) ಬ್ಯಾಂಕಿಗೆ ಸಲ್ಲಿಸುತ್ತಾರೆ. ಆ ಚೆಕ್ ವಿವರಗಳನ್ನ CTS ನಿಂದ ಕ್ರಾಸ್ ಚೆಕ್ ಮೂಲಕ ಚೆಕ್ ಮಾಡಲಾಗುತ್ತದೆ. ಯಾವುದೇ ವ್ಯತ್ಯಾಸಗಳು ಕಂಡುಬಂದ್ರೆ, ಬ್ಯಾಂಕಿಗೆ ತಿಳಿಸಲಾಗುತ್ತೆ ಮತ್ತು ಪರಿಹಾರ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ.

TRENDING