Thursday, January 21, 2021
Home ಸುದ್ದಿ ಜಾಲ ಗ್ರಾಮ ಪಂಚಾಯತಿ ಚುನಾವಣೆ: ಮತ ಎಣಿಕೆ ಆರಂಭ

ಇದೀಗ ಬಂದ ಸುದ್ದಿ

ಗ್ರಾಮ ಪಂಚಾಯತಿ ಚುನಾವಣೆ: ಮತ ಎಣಿಕೆ ಆರಂಭ

 ಮಣಿಪಾಲ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, 91 ಸಾವಿರಕ್ಕೂ ಹೆಚ್ಚು ಗ್ರಾಮೀಣ ಜನಪ್ರತಿನಿಧಿಗಳ ಭವಿಷ್ಯ ನಿರ್ಣಯವಾಗಲಿದೆ. ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸಂಜೆ ವೇಳೆಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಅಂತಿಮ ಫ‌ಲಿತಾಂಶ ಹೊರಬೀಳಲಿದೆ.

ಪ್ರತಿ ಪಂಚಾಯಿತಿಯ ಒಟ್ಟು ಸ್ಥಾನಗಳನ್ನು ವಿಭಜಿಸಿ 3 ಕ್ಷೇತ್ರಗಳಿಗೆ ಒಂದು ಟೇಬಲ್‌ನಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಟೇಬಲ್‌ಗೆ 2 ಇಬ್ಬರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜಿಲ್ಲಾಧಿಕಾರಿಯವರು ಮೇಲುಸ್ತುವಾರಿ ವಹಿಸಿಕೊಂಡಿರುತ್ತಾರೆ.

ಮತ ಎಣಿಕೆ ಮತ್ತು ಫ‌ಲಿತಾಂಶ ಘೋಷಣೆಯ ನಿಯಮಗಳ ಪ್ರಕಾರ ಚುನಾವಣೆ ನಡೆದ ಎಲ್ಲಾ ಸ್ಥಾನಗಳ ಫ‌ಲಿತಾಂಶವನ್ನು ಅಂತಿಮಗೊಳಿಸಿ ಅದನ್ನು ಆಯೋಗಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್‌. ಹೊನ್ನಾಂಬ ಅವರು ತಿಳಿಸಿದ್ದಾರೆ.

TRENDING