ದಕ್ಷಿಣ ಯೆಮೆನ್ ನಗರದಲ್ಲಿ ಬುಧವಾರ ಹೊಸದಾಗಿ ರಚಿಸಲಾದ ಸಚಿವ ಸಂಪುಟವನ್ನ ಹೊತ್ತೊಯ್ಯುವ ವಿಮಾನವೊಂದು ಅಲ್ಲಿ ಇಳಿದ ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ.
ಸ್ಫೋಟದ ಮೂಲ ಸ್ಪಷ್ಟವಾಗಿಲ್ಲ ಮತ್ತು ಸ್ಫೋಟದ ಹೊಣೆಯನ್ನ ಯಾವುದೇ ಗುಂಪು ಹೊತ್ತುಕೊಂಡಿಲ್ಲ.