Wednesday, January 27, 2021
Home ಜಿಲ್ಲೆ ಮೈಸೂರು ಮಾರ್ಗಮಧ್ಯೆ ಕೆಟ್ಟು ನಿಂತ ಅಂಬ್ಯುಲೆನ್ಸ್ : ಹಾರಿ ಹೋದ ವೃದೆಯ ಪ್ರಾಣ

ಇದೀಗ ಬಂದ ಸುದ್ದಿ

ಮಾರ್ಗಮಧ್ಯೆ ಕೆಟ್ಟು ನಿಂತ ಅಂಬ್ಯುಲೆನ್ಸ್ : ಹಾರಿ ಹೋದ ವೃದೆಯ ಪ್ರಾಣ

ಮೈಸೂರು: ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತರಲು ಬಂದಿದ್ದ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ  ೫೫ ವರ್ಷದ ಬೋರಮ್ಮ ಎಂಬವರು ಮೃತಪಟ್ಟಿದ್ದಾರೆ.

ಲೋ ಬಿಪಿಯಾಗಿ ಕುಸಿದು ಬಿದ್ದ ವೃದೆಯ ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ಗೆ  ಕುಟುಂಬಸ್ಥರು ಕರೆ ಮಾಡಿದ್ದಾರೆ. ಈ ವೇಳೆ  ವೃದೆ ಕರೆದೊಯ್ಯಲು ಸ್ಥಳಗಕ್ಕಾಗಮಿಸಿ ಕೆಟ್ಟು ನಿಂತ 108 ಆಂಬುಲೆನ್ಸ್ ನಿಂತಿದೆ.

ಬಳಿಕ ಕುಟುಂಬದವರು ಖಾಸಗಿ ವಾಹನದಲ್ಲಿ ವೃದೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆ ತಂದಿದ್ದಾರೆ.ತಡವಾಗಿ ಆಸ್ಪತ್ರೆಗೆ ಕರೆದೊಯ್ದ ಪರಿಣಾಮ ಮಂಡ್ಯ ಆಸ್ಪತ್ರೆಯಲ್ಲಿ ವೃದ್ಧೆ ಸಾವನಪ್ಪಿದ್ದಾರೆ. ಇದರಿಂದಾಗಿ ಕೆಟ್ಟುನಿಂತ ಅಂಬುಲೆನ್ಸ್ ಚಾಲಕನ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯು ಸರಿಯಾದ ನಿರ್ವಹಣೆ ಮಾಡದ ಪರಿಣಾಮ ವೃದ್ಧೆಯ ಪ್ರಾಣ ತೆಗೆದ ಆರೋಗ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

TRENDING