Tuesday, January 19, 2021
Home ಕೋವಿಡ್-19 ‘ಯುಕೆ’ಯಿಂದ ಉಡುಪಿ ಜಿಲ್ಲೆಗೆ ಬಂದ 36 ಮಂದಿಯ ಕೊರೋನಾ ವರದಿ ನೆಗೆಟಿವ್

ಇದೀಗ ಬಂದ ಸುದ್ದಿ

‘ಯುಕೆ’ಯಿಂದ ಉಡುಪಿ ಜಿಲ್ಲೆಗೆ ಬಂದ 36 ಮಂದಿಯ ಕೊರೋನಾ ವರದಿ ನೆಗೆಟಿವ್

ಉಡುಪಿ, ಡಿ.29: ರೂಪಾಂತರಿತ ಕೊರೋನ ವೈರಸ್ ಕಂಡುಬಂದಿರುವ ಬ್ರಿಟಿನ್‌ನಿಂದ ಈವರೆಗೆ ಒಟ್ಟು 36 ಮಂದಿ ಉಡುಪಿ ಜಿಲ್ಲೆಗೆ ಆಗಮಿ ಸಿದ್ದು, ಇವರೆಲ್ಲರ ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಫಲಿತಾಂಶವನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೆಗೆಟಿವ್ ಬಂದಿ ರುವ ಇವರೆಲ್ಲರನ್ನೂ 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಅವಧಿಯಲ್ಲಿ ಅವರ ನಮ್ಮ ವೈದ್ಯರ ನಿಗಾದಲ್ಲಿ ಇರುವರು ಎಂದು ಜಗದೀಶ್ ನುಡಿದರು.

ಈ 36 ಮಂದಿಗೆ ಒಟ್ಟು 47 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಇವರೆಲ್ಲರನ್ನು ಸಹ ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರು ಸಹ ನೆಗೆಟಿವ್ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬ್ರಿಟನ್‌ನಿಂದ ಬಂದವರಿಂದ ಸೋಂಕು ಹರಡುವ ಅಪಾಯ ಇಲ್ಲವಾಗಿದೆ ಎಂದು ಅವರು ತಿಳಿಸಿದರು.

TRENDING