ಬೆಂಗಳೂರು : ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗಿಯಾಗಿದ್ದ ‘BMTC’ ನೌಕರರ ಮುಖಂಡ ಆನಂದ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಆನಂದ್ ಅವರು ಸಾರಿಗೆ ನೌಕರರ ಒಕ್ಕೂಟದ ಮುಖಂಡರಾಗಿದ್ದು, ಸದ್ಯ ಬಿಎಂಟಿಸಿ ಡಿಪೋ 16 ರಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. 2014 ರ ಹಳೆ ಪ್ರಕರಣವೊಂದನ್ನು ತನಿಖೆಗೆ ಒಳಪಡಿಸಿ ಸಂಸ್ಥೆಯಿಂದಲೇ ವಜಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಆನಂದ್ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗಿಯಾಗಿದ್ದರು.
ಏನದು 2014 ರ ಹಳೆ ಪ್ರಕರಣ..?
2014 ರಲ್ಲಿ ನಿರ್ವಾಹಕರೊಬ್ಬರು ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಂಸ್ಥೆ ಕಡೆಯಿಂದ ಬರೀ 50 ಸಾವಿರ ನೀಡಲಾಗಿತ್ತು. ಆಗ ನಾನು 10 ಲಕ್ಷ ಕೊಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ದೆ, ಆಗ ನನ್ನ ಮೇಲೆ ಚಾರ್ಜ್ ಶೀಟ್ ಹಾಕಲಾಗಿತ್ತು. ಈಗ ಅದೇ ಪ್ರಕರಣವನ್ನು ಮತ್ತೆ ಓಪನ್ ಮಾಡಿಸಿ ಈ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾರೆ ಎಂದು ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ.