Wednesday, January 20, 2021
Home ರಾಜ್ಯ ರಾಜ್ಯದ ಅಬಕಾರಿ ರಕ್ಷಕರು, ಹಿರಿಯ ರಕ್ಷಕರ ಹುದ್ದೆಗೆ ಮರುನಾಮಕರಣ

ಇದೀಗ ಬಂದ ಸುದ್ದಿ

ರಾಜ್ಯದ ಅಬಕಾರಿ ರಕ್ಷಕರು, ಹಿರಿಯ ರಕ್ಷಕರ ಹುದ್ದೆಗೆ ಮರುನಾಮಕರಣ

ಬೆಂಗಳೂರು: ರಾಜ್ಯದ ಅಬಕಾರಿ ರಕ್ಷಕರು ಮತ್ತು ಅಬಕಾರಿ ಹಿರಿಯ ರಕ್ಷಕರ ಹುದ್ದೆಗೆ ಮರುನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದ್ದು, ಅಬಕಾರಿ ರಕ್ಷಕರನ್ನು ಅಬಕಾರಿ ಕಾನ್ ಸ್ಟೇಬಲ್ ಮತ್ತು ಅಬಕಾರಿ ಹಿರಿಯ ರಕ್ಷಕರನ್ನು ಅಬಕಾರಿ ಹೆಡ್ ಕಾನ್ ಸ್ಟೇಬಲ್ ಎಂದು ಮರುನಾಮಕರಣ ಮಾಡಲಾಗಿದೆ.

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ(ಅಬಕಾರಿ) ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದು, ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಬಕಾರಿ ರಕ್ಷಕರು, ಅಬಕಾರಿ ಹಿರಿಯ ರಕ್ಷಕರ ಹುದ್ದೆಗಳನ್ನು ಕ್ರಮವಾಗಿ ಅಬಕಾರಿ ಕಾನ್ ಸ್ಟೇಬಲ್ ಮತ್ತು ಅಬಕಾರಿ ಹೆಡ್ ಕಾನ್ ಸ್ಟೇಬಲ್ ಎಂದು ಮರು ನಾಮಕರಣ ಮಾಡಲಾಗಿದೆ.

ನಾಮಕರಣ ಮಾಡಲಾಗಿರುವ ಹೊರತಾಗಿ ಹುದ್ದೆಗಳ ಮರುನಾಮಕರಣದಿಂದ ಸಂಬಂಧಿತ ನೌಕರರು ಯಾವುದೇ ವಿಶೇಷ ಸೌಲಭ್ಯ ಕೋರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

TRENDING