Wednesday, January 20, 2021
Home ಸುದ್ದಿ ಜಾಲ ಫಾಸ್ಟ್ಯಾಗ್ ಕುರಿತಂತೆ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮತ್ತೊಂದು ಸಿಹಿಸುದ್ದಿ

ಇದೀಗ ಬಂದ ಸುದ್ದಿ

ಫಾಸ್ಟ್ಯಾಗ್ ಕುರಿತಂತೆ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮತ್ತೊಂದು ಸಿಹಿಸುದ್ದಿ

ನವದೆಹಲಿ : ಫಾಸ್ಟ್ಯಾಗ್ ಕುರಿತಂತೆ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮೈ ಫಾಸ್ಟ್ಯಾಗ್ ಆಯಪ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ವೈಶಿಷ್ಟಗಳೊಂದಿಗೆ ನವೀಕರಿಸಿದ್ದು, ಗ್ರಾಹಕರು ಆಯಪ್ ಮೂಲಕವೇ ಫಾಸ್ಟ್ಯಾಗ್ ಖಾತೆಯಲ್ಲಿನ ಬಾಕಿ ಮೊತ್ತವನ್ನು ಪರಿಶೀಲಿಸಬಹುದಾಗಿದೆ.

2021 ರ ಜನವರಿ 1 ರಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗುವ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ನ ಸುಗಮ ಬಳಕೆಗೆ ಅನುಕೂಲವಾಗಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಚೆಕ್ ಬ್ಯಾಲೆನ್ಸ್ ಸ್ಟೇಟಸ್ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದ್ದು, ಇದರಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸುವ ಮೂಲಕ ಅದರ ಫಾಸ್ಟ್ಯಾಗ್ ಖಾತೆಯಲ್ಲಿ ಉಳಿದಿರುವ ಬಾಕಿ ಮೊತ್ತವನ್ನು ಪರಿಶೀಲಿಸಬಹುದು.

TRENDING