Tuesday, January 26, 2021
Home ಸುದ್ದಿ ಜಾಲ ಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ಹೊಸ ವಿಮಾನ ಸಂಚಾರ ಆರಂಭ

ಇದೀಗ ಬಂದ ಸುದ್ದಿ

ಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ಹೊಸ ವಿಮಾನ ಸಂಚಾರ ಆರಂಭ

ಮೈಸೂರು, ಡಿ. 29: ಇಂಡಿಗೋ ಏರ್‌ಲೈನ್ಸ್‌ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್‌ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.

ಪ್ರತಿದಿನ ಹೈದರಬಾದ್ ನಿಂದ ಬೆಳಗ್ಗೆ 8.35 ಕ್ಕೆ ಹೊರಟು ಮೈಸೂರಿಗೆ 10.25ಕ್ಕೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 10.50ಕ್ಕೆ ಇಂಡಿಗೊ ಏರ್ ಲೈನ್ಸ್ ವಿಮಾನ ಹೊರಟು ಮಧ್ಯಾಹ್ನ 12.50ಕ್ಕೆ ಸರಿಸುಮಾರಿಗೆ ಹೈದರಾಬಾದ್ ತಲುಪುತ್ತದೆ. ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ.

ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ.

ಇಂಡಿಗೋ ಸಂಸ್ಥೆ ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ ಕಾರ್ಯಾಚರಣೆ ನಡೆಸಲಿದೆ.

TRENDING