Saturday, January 16, 2021
Home ಕೋವಿಡ್-19 ಟಾಲಿವುಡ್ ನಟ`ರಾಮಚರಣ್' ಗೆ ಕೊರೊನಾ ಪಾಸಿಟಿವ್

ಇದೀಗ ಬಂದ ಸುದ್ದಿ

ಟಾಲಿವುಡ್ ನಟ`ರಾಮಚರಣ್’ ಗೆ ಕೊರೊನಾ ಪಾಸಿಟಿವ್

ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ ಮಗ, ಟಾಲಿವುಡ್ ನಟ ರಾಮ್ ಚರಣ್ ತೇಜ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಸದ್ಯ ಕ್ವಾರಂಟೈನ್ ನಲ್ಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಮ್ ಚರಣ್, ನನಗೆ ಕೊರೊನಾ ವೈರಸ್ ಸೋಂಕು ದೃಡಪಟ್ಟಿದೆ. ಆದರೆ ಯಾವುದೆ ಲಕ್ಷಣಗಳು ಇಲ್ಲ. ಸದ್ಯ ಹೋಂ ಕ್ವಾರಂಟೈನ್ ಆಗಿದ್ದೇನೆ. ಬೇಗ ಗುಣಮುಖನಾಗಿ ಹೊರ ಬರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಜೊತೆಗೆ ಸಂಪರ್ಕದಲ್ಲಿದ್ದ ಎಲ್ಲರೂ ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ, ನನ್ನ ಆರೋಗ್ಯದ ಹೆಚ್ಚಿನ ಮಾಹಿತಿ ನೀಡುತ್ತಿರುತ್ತೇನೆ ಎಂದು ಹೇಳಿದ್ದಾರೆ.

TRENDING